


ಬೆಳ್ತಂಗಡಿ; ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ 2025ನೇ ಸಾಲಿನಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆ ಪ್ರಾರಂಭವಾದ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ವತಿಯಿಂದ ನೋಂದಣಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಬಿ.ಪದ್ಮನಾಭ ಸಾಲ್ಯಾನ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಾ ಈ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಕರೆ ನೀಡಿದರು. ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಶುಭ ಹಾರೈಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್, ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾoಶುಪಾಲರಾದ ಸುರೇಶ್ ವಿಟ್ಲ,ಯುವನಿಧಿ ಯೋಜನೆಯ ಜಿಲ್ಲಾ ತರಬೇತುದಾರರಾದ ಶ್ರೀಮತಿ ಮಂಜೂಷಾ ಹಾಗೂ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ನೇಮಿರಾಜ ಕಿಲ್ಲೂರು, ಸೌಮ್ಯ ಲಾಯಿಲ, ಮರಿಟಾ ಪಿಂಟೋ, ಶರೀಫ್ ಸಬರಬೈಲು, ಸತೀಶ್ ಹೆಗ್ಡೆ ವೇಣೂರು, ವಿಜಯ ಗೌಡ, ವಂದನಾ ಭಂಡಾರಿ, ವೀರಪ್ಪ ಮೊಯ್ಲಿ, ತಾಲೂಕು ಪಂಚಾಯತ್ ಅಧೀಕ್ಷಕರಾದ ಡಿ.ಪ್ರಶಾಂತ್ ಬಳಂಜ ಮತ್ತು ನೋಡೆಲ್ ಅಧಿಕಾರಿ ಹೆರಾಲ್ಡ್ ಸಿಕ್ವೇರಾ ಇವರು ಉಪಸ್ಥಿತರಿದ್ದರು.
