Home ಸ್ಥಳೀಯ ಸಮಾಚಾರ ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ ಆಯ್ಕೆ

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ ಆಯ್ಕೆ

2
0

ಬೆಳ್ತಂಗಡಿ;  ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ಮಹಾಸಭೆಯು ಜಮೀಯತುಲ್ ಫಲಾಹ್ ಸಭಾ ಭವನದಲ್ಲಿ ಬಿ. ಶೇಕುಂಞ್ಞ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಪ್ರಧಾನ ಕಾರ್ಯದರ್ಶಿ ಗಳಾದ ಆಲಿಯಬ್ಬಾ ಪುಲಾಬೆ ವಾರ್ಷಿಕ ವರದಿ ಮಂದಿಸಿದರು.

ನಂತರ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಜಿಲ್ಲಾ ವೀಕ್ಷಕರಾದ ಎಮ್.ಎಚ್. ಇಕ್ಬಾಲ್ ರವರ ನೇತೃತ್ವದಲ್ಲಿ ನೂತನ ಸಮಿತಿಯ ನ್ನು ರಚಿಸಲಾಯಿತು. 2025-26ನೇ ಸಾಲಿನ ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಖಾಲಿದ್ ಪುಲಾಬೆ, ಉಪಾಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ, ಖಾಸಿಂ ಪದ್ಮುಂಜ, ಪ್ರಧಾನ ಕಾರ್ಯದರ್ಶಿಗಳಾಗಿ ಉಮರ್ ಅಹಮದ್, ಜೊತೆ ಕಾರ್ಯದರ್ಶಿ ಅಲಿಯಬ್ಬಾ ಪುಲಾಬೆ, ಕೋಶಾಧಿಕಾರಿಯಾಗಿ ಇಬ್ರಾಹಿಂ ಮುಸ್ಲಿಯಾರ್ ಆಯ್ಕೆಯಾದರು.

ಉಮರ್ ಕುಂಞ್ಞ ನಾಡ್ಜೆ ಸ್ವಾಗತಿಸಿ, ಉಮರ್ ಅಹಮದ್ ವಂದಿಸಿದರು.

LEAVE A REPLY

Please enter your comment!
Please enter your name here