
ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದ ಸಮೀಪ ಸಾಕ್ಷಿ ದೂರುದಾರ ತೋರಿಸಿದ 9ನೆಯ ಸ್ಥಳದಲ್ಲಿ ಅಗೆಯುವ ಕಾರ್ಯವನ್ನು ನಡೆಸಲಾಗಿದ್ದು ಈ ಸ್ಥಳದಲ್ಲಿ ಯಾವುದೇ ಅವಶೇಷಗಳು ಲಭಿಸಿಲ್ಲ ಎಂದು ತಿಳಿದುವಬಂದಿದೆ.
ಐದನೆ ದಿನದ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿದೆ. ಇಂದು ಒಂದಕ್ಕಿತ ಹೆಚ್ಚು ಜಾಗಗಳನ್ನು ಅಗೆಯುವ ಸಿದ್ದತೆಯೊಂದಿಗೆ ತಂಡ ಆಗಮಿಸಿತ್ತು. ಒಂಬತ್ತರ ಕಾರ್ಯಾಚರಣೆ ಪೂರ್ಣ ಗೊಂಡಿದ್ದು ಮಧ್ಯಾಹ್ನದ ಬಳಿಕ ಹತ್ತನೆಯ ಸ್ಥಳದಲ್ಲಿ ಅಗೆಯುವ ಕಾರ್ಯ ನಡೆಯಲಿದೆ