


ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಗಾಳಿ ಮಳೆಗೆ ಕುವೆಟ್ಟು ಗ್ರಾಮದ ವರಕಬೆ ಬಳಿ ರಸ್ತೆಗೆ ಬೃಹತ್ ಗಾತ್ರದ ಮರಬಿದ್ದು ರಸ್ತೆ ಸಂಪೂರ್ಣ ಬ್ಲಾಕ್ ಆದ ಘಟನೆ ಇಂದು (ಜು. 26) ನಡೆದಿದೆ.
ರಸ್ತೆ ಸಂಪೂರ್ಣ ಬ್ಲಾಕ್ ಆಗಿದ್ದು, ವಾಹನ ಸವರಾರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಸೇರಿ ತೆರವು ಕಾರ್ಯ ನಡೆಯುತ್ತಿದೆ.
