


ಬೆಳ್ತಂಗಡಿ; ಕಾಡಾನೆ ಹಾವಳಿಯಿಂದಾಗಿ ತತ್ತರಿಸಿ ಹೋಗಿರುವ ಬೆಳ್ತಂಗಡಿ ತಾಲೂಕಿನ ಜನರ ಪರವಾಗಿ ದಿನಾಂಕ 21/07/2025 ರಂದು ಬೆಳ್ತಂಗಡಿ ಯಲ್ಲಿ KSMCA ನೇತೃತ್ವದಲ್ಲಿ ನಡೆದ ಜನಾಂಧೋಲನದ ಮುಂದುವರಿದ ಬಾಗವಾಗಿ ಜು25ರಂದು ಉಸ್ತುವಾರಿ ಸಚಿವರಿಗೆ ಕೆ.ಎಸ್.ಎಂ.ಸಿ.ಎ ಯ ಪರವಾಗಿ ಕೇಂದ್ರ ಸಮಿತಿ ಅಧ್ಯಕ್ಷ ರಾದ ಬಿಟ್ಟಿ ನೆಡುನಿಲಂ ರವರ ಸೂಚನೆ ಮೇರೆಗೆ ಕೇಂದ್ರಸಮಿತಿ ಸದಸ್ಯರಾದ ಜಾರ್ಜ್ ಟಿ ವಿ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್‌ರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಕರ್ನಾಟಕ ಸೀರೋ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್(ರಿ) (K.S.M.C.A) ಸಂಘಟನೆಯ ವತಿಯಿಂದ ಮನವಿಯನ್ನು ಸಲ್ಲಿಸಿ ಪರಿಹಾರ ಹಾಗೂ ರಕ್ಷಣೆಯ ಬಗ್ಗೆ ಚರ್ಚಿಸಲಾಯಿತು. ಈ ಸಂಧರ್ಬದಲ್ಲಿ K.P.C.C ಸದಸ್ಯರಾದ ರಕ್ಷಿತ್ ಶಿವರಾಮ್‌ರವರು ಉಪಸ್ಥಿತರಿದ್ದರು. ಹಾಗೂ ಆವರು ಇದರ ಬಗ್ಗೆ ಪ್ರತ್ಯೇಕ ಮನವಿಯನ್ನು ಸಚಿವರಿಗೆ ಸಲ್ಲಿಸಿದರು.
ಮಾನ್ಯ ಸಚಿವರು ಕೂಡಲೇ ಅಲ್ಲಿ ಉಪಸ್ಥಿತರಾದ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚುಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಐವಾನ್ ಡಿ ಸೋಜ, ಪದ್ಮರಾಜ್ ರೊಂದಿಗೆ ಇದರ ಬಗ್ಗೆ ಗಂಬೀರವಾಗಿ ಚರ್ಚಿಸಿದರು. ಹಾಗೂ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಯವರಿಗೆ ಜನರ ರಕ್ಷಣೆಯ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಉಸ್ತುವಾರಿ ಸಚಿವರು ರಾಜ್ಯ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಜನರ ರಕ್ಷಣೆ ಹಾಗೂ ಸೂಕ್ತ ಪರಿಹಾರ ನೀಡುವ ಬಗ್ಗೆ ಭರವಸೆಯನ್ನು ನೀಡಿದರು.
