Home ಸ್ಥಳೀಯ ಸಮಾಚಾರ ಗ್ಯಾರಂಟಿ ಯೋಜನೆಗೆ ಎರಡು ವರ್ಷ; ವೇಣೂರಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ಸಂಭ್ರಮಾಚರಣೆ

ಗ್ಯಾರಂಟಿ ಯೋಜನೆಗೆ ಎರಡು ವರ್ಷ; ವೇಣೂರಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ಸಂಭ್ರಮಾಚರಣೆ

0

ಬೆಳ್ತಂಗಡಿ  ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಯ ಅಡಿಯಲ್ಲಿ ಶಕ್ತಿ ಯೋಜನೆ ಎರಡು ವರ್ಷ ಪೂರೈಸಿದ್ದು ಈ ಹಿನ್ನಲೆಯಲ್ಲಿ ಜು 14 ರಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ನೇತೃತ್ವದಲ್ಲಿ ವೇಣೂರು ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ನಡೆಯಿತು.

ಈ ಸಂದರ್ಭದಲ್ಲಿ ಮಹಿಳೆಯವರೆಲ್ಲ ಸೇರಿ ವೇಣೂರು ಬಸ್ ನಿಲ್ದಾಣದಲ್ಲಿ  ಧರ್ಮಸ್ಥಳ -ಹುಬ್ಬಳ್ಳಿ ಬಸ್ಸಿಗೆ ಆರತಿ ಎತ್ತಿ ಪೂಜೆ ಮಾಡಿ ಸಂಭ್ರಮಿಸಿದರು
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ  ಪದ್ಮನಾಭ ಸಾಲ್ಯಾನ್ ಮಾತನಾಡಿ  ಸರ್ಕಾರದ ಪಂಚ ಗ್ಯಾರಂಟಿಗಳ ಬಗ್ಗೆಅದರಲ್ಲಿಯೂ ವಿಶೇಷ ವಾಗಿ ಶಕ್ತಿ ಯೋಜನೆಯ ಬಗ್ಗೆ ಅಂಕಿ ಅಂಶ ನೀಡಿ ಮುಂದಿನ ದಿನಗಳಲ್ಲಿ ಮೂಡಬಿದ್ರಿ,ವೇಣೂರು ,ಅಳದಂಗಡಿ ನಾರಾವಿ ಸಿದ್ದಕಟ್ಟೆ ಪ್ರದೇಶಗಳಿಗೆ ಶಾಲಾ ಮಕ್ಕಳಿಗೆ, ಕಾರ್ಮಿಕರಿಗೆ ಪ್ರಯೋಜನ ವಾಗುವಂತೆ ಸಾರಿಗೆ ಬಸ್ಸಿನ ಸೇವೆಗೆ ಇಲಾಖೆಗೆ ಮನದಟ್ಟು ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ  ಶೇಖರ್ ಕುಕ್ಕೇಡಿ ,ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ  ಭವಾನಿ ಶಂಕರ್ ,ಕೆ ಎಸ್ ಆರ್ ಟಿ ಸಿ ಧರ್ಮಸ್ಥಳ ಡಿಪ್ಪೋ ಮ್ಯಾನೆಜರ್  ಕಮಲ್ ರಾಜ್ ,ಗ್ಯಾರಂಟಿ ಸಮಿತಿ ಸದಸ್ಯರಾದ ಷರೀಫ್ ಸಬರಬೈಲ್ , ವಂದನಾ ಭಂಡಾರಿ,ನೇಮಿರಾಜ್ ಕಿಲ್ಲೂರು , ಸೌಮ್ಯ ಬೆಳ್ತಂಗಡಿ,ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ  ಜಯರಾಮ್ ಶೆಟ್ಟಿ ಪ್ರಮುಖರಾದ ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ ,ನಿತೀಶ್ ಕೋಟಿಯನ್ , ರಮೇಶ್ ಪೂಜಾರಿ ಪಡ್ಡಾಯಿ ಮಜಲು , ಬಾಲಕೃಷ್ಣ ಭಟ್ , ಅರವಿಂದ ಶೆಟ್ಟಿ ಖಂಡಿಗ ,ಮಾರ್ಕ್ ಪಿರೇರಾ ಈಶ್ವರ್ ದಯಾ ,ದಯಾನಂದ ಅಲಂತಿಯಾರ್ ,ಅಶೋಕ ಪಾನೂರು ,ಅಶ್ರಫ್ ಶಾಂತಿ ನಗರ ,ಜಕ್ರಿ ಮೂಡುಕೋಡಿ ,ದೇಜಪ ಶೆಟ್ಟಿ ,ಕುಕ್ಕೇಡಿ ಪಂಚಾಯತ್ ಮಾಜಿ ಅಧ್ಯಕ್ಶರುಗಳಾದ  ತೇಜಸ್ವಿನಿ , ಗುಣವತಿ , ಸೇಸ ,ಶಶಿಧರ್ ಶೆಟ್ಟಿ ಮೂಡುಕೋಡಿ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ  ರಾಘವೇಂದ್ರ ಪಾಟೀಲ್ ಸೇರಿದಂತೆ ಮಹಿಳೆಯರು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು

ಧರ್ಮಸ್ಥಳ ಡಿಪೋ ಮ್ಯಾನೇಜರ್ ಕಮಲ್ ರಾಜ್ ,ಬಸ್ ಡ್ರೈವರ್  ಶ್ರೀನಿವಾಸ್ , ನಿರ್ವಾಹಕ  ಗಣರಾಜ್ ಭಟ್ ರವರನ್ನು ಗುಲಾಬಿ ಹೂವು ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಹೆಟ್ಟಾಜೆ ಪ್ರಭಾಕರ್ ಹೆಗ್ಡೆ ಸ್ವಾಗತಿಸಿದರು. ಗ್ರಾ ಪo ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version