
ಬೆಳ್ತಂಗಡಿ : ವಿವಾಹಿತೆ ಮಹಿಳೆ ತಾಯಿ ಮನೆಯಲ್ಲಿ ನೇಣಿಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಯ್ಯೂರಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದರ್ಖಾಸ್ ನಿವಾಸಿ ದೇವಪ್ಪ ಬಂಗೇರ ಎಂಬವರ ಮಗಳು ರಮ್ಯ(32) ಮನೆಯ ಕೊಣೆಯಲ್ಲಿ ಜುಲೈ 12 ರಂದು ಮಧ್ಯಾಹ್ನ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ವರ್ಷದ ಹಿಂದೆ ಕೊಯ್ಯೂರು ಗ್ರಾಮದ ಪಾದಡ್ಕ ನಿವಾಸಿ ಲತೀಶ್ ನೊಂದಿಗೆ ಈಕೆಯ ವಿವಾಹವಾಗಿತ್ತು. ರಮ್ಯ ಬೆಳ್ತಂಗಡಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಮ್ಯಗೆ ಆರೋಗ್ಯಸಮಸ್ಯೆಗಳಿತ್ತು ಎನ್ನಲಾಗಿದೆ
ಈಕೆ ತಾಯಿ ಮನೆಗೆ ಬಂದಿದ್ದವಳು ಆರೋಗ್ಯ ಸಮಸ್ಯೆ ಬಗ್ಗೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅನುಮಾನಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಕಂದಾಯ ಇಲಾಖೆಯ ಕಂದಾಯ ಇನ್ಸ್ಪೆಕ್ಟರ್ ಪ್ರತೀಷ್ ಮತ್ತು ಬೆಳ್ತಂಗಡಿ ಪೊಲೀಸರು ಭೇಟಿ ನೀಡಿದ್ದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಮಹತ್ಯೆ ಪ್ರಕರಣ ದಾಖಲಾಗಿದೆ.