
ಬೆಳ್ತಂಗಡಿ: ವೇಣೂರು ಠಾಣಾವ್ಯಪ್ತಿಯ ಗೋಳಿಯಂಗಡಿಯಲ್ಲಿ ಮನೆಯ ಮುಂದೆ ನಿಲ್ಲಸಿದ್ದ ಬೈಕ್ ಅನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದ್ದು ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ನಿವಾಸಿ ಅಬುಸಾಲಿ ಎಂಬವರು ಜು 8 ರಂದು ಸಂಜೆ 7 ಗಂಟೆಯ ಸುಮಾರಿಗೆ ಗೋಳಿಯಂಗಡಿಯಲ್ಲಿರುವ ತನ್ನ ಮನೆಯ ಎದುರು ಕೆ.ಎ 21 ಎಸ್ 7390ನಂಬರ್ ನ ಬೈಕ್ ಅನ್ನು ನಿಲ್ಲಿಸಿ ಮೂಡಬಿದ್ರೆಯಲ್ಲಿರುವ ಇನ್ನೊಂದು ಮನೆಗೆ ಹೋಗಿದ್ದರು ಅವರು ಜು9ರಂದು ಬೆಳಗ್ಗೆ ಮನೆಗೆ ಹಿಂತಿರುಗಿದಾಗ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿತ್ತು. ಕಳವಾದ ಬೈಕಿನ ಮೌಲ್ಯ ರೂ 15,000ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.