Home ಅಪರಾಧ ಲೋಕ ಕಿಲ್ಲೂರು; ಮೇಯಲು ಬಿಟ್ಟಿದ್ದ ದನಕ್ಕೆ ವಿಷವಿಕ್ಕಿ ಸಾಯಿಸಿದ  ದುಷ್ಕರ್ಮಿಗಳು; ಪ್ರಕರಣ ದಾಖಲು

ಕಿಲ್ಲೂರು; ಮೇಯಲು ಬಿಟ್ಟಿದ್ದ ದನಕ್ಕೆ ವಿಷವಿಕ್ಕಿ ಸಾಯಿಸಿದ  ದುಷ್ಕರ್ಮಿಗಳು; ಪ್ರಕರಣ ದಾಖಲು

0

ಬೆಳ್ತಂಗಡಿ; ಕಿಲ್ಲೂರಿನಲ್ಲಿ ಮೇಯಲು ಬಿಟ್ಟಿದ್ದ ದನಕ್ಕೆ ದುಷ್ಕರ್ಮಿಗಳು ವಿಷವಿಕ್ಕಿ ಸಾಯಿಸಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಿಲ್ಲೂರು ಕೋಯನಗರ ಎಂಬಲ್ಲಿ ಘಟನೆ ನಡೆಸಿದೆ ಇಲ್ಲಿನ ನಿವಾಸಿ ಇಸುಬು ಎಂಬವರಿಗೆ ಸೇರಿದ ದನವನ್ನು ಸೋಮವಾರ ಎಂದಿನಂತೆ ಮೇಯಲು ಬಿಟ್ಟಿದ್ದರು. ಸಂಜೆಯ ವೇಳೆ ದನ ಸಾವನ್ನಪದಪಿರುವುದು ಕಂಡು ಬಂದಿದೆ. ನೋಡಿದಾಗ ಇದು ವಿಷ ಪ್ರಾಶನದಿಂದ ಸಾವನ್ನಪ್ಪಿರುವಂತೆ ಕಂಡು ಬಂದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ದನದ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ವರದಿ ಬಂದ ಬಳಿಕವಷ್ಟೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version