Home ಅಪರಾಧ ಲೋಕ ಸುಲ್ಕೇರಿಯ ಯುವಕ ನೇಣುಬಿಗಿದು ಆತ್ಮಹತ್ಯೆ

ಸುಲ್ಕೇರಿಯ ಯುವಕ ನೇಣುಬಿಗಿದು ಆತ್ಮಹತ್ಯೆ

6
0

ಸುಲ್ಕೇರಿ: ಗಾರೆ ಕೆಲಸ ಮಾಡಿಕೊಂಡಿದ್ದ ಯುವಕನೊರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ಕೇರಿಯಲ್ಲಿ ಜು. 4ರಂದು ನಡೆದಿದೆ.

ಮೃತ ಯುವಕನನ್ನು ಸುಲ್ಕೇರಿ ಗ್ರಾಮದ ಮುಡಿಪಿರೆ ನಿವಾಸಿ ಕಿಶೋರ್ (25ವ) ಎಂದು ಗುರುತಿಸಲಾಗಿದೆ.

ಕಿಶೋರು ಅವರು ಗಾರೆ ಕೆಲಸ, ಮದ್ದು ಸಿಂಪಡಿಸುವ ಕೆಲಸ ಮಾಡಿಕೊಂಡಿದ್ದರೆನ್ನಲಾಗಿದೆ. ಕಳೆದ ಒಂದು ವಾರದಿಂದ ಮಂಕಾಗಿದ್ದು, ಯಾರಲ್ಲಿಯೂ ಹೆಚ್ಚು ಬೆರೆಯುತ್ತಿರಲಿಲ್ಲ. ನಿನೆ ಮಧ್ಯಾಹ್ನದಿಂದ ಅವರು ನಾಪತ್ತೆಯಾಗಿದ್ದು,ಸಂಜೆಯವರೆಗೆ ಮನೆಗೆ ಬಾರದೆ ಇದ್ದಾಗ ಸ್ಥಳಿಯರು ಸೇರಿ ಹುಡುಕಲು ಪ್ರಾರಂಭುಸಿದರು.ರಾತ್ರಿ ಸುಮಾರು 11 ಗಂಟೆಗೆ ನೇಣು ಬಿಗಿದುಕೊಂಡ ರೀತಿಯಲ್ಲಿ ಕಿಶೋರು ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.ಸ್ಥಳಕ್ಕೆ ವೇಣೂರು ಪೋಲಿಸರು ಆಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here