
ಬೆಳ್ತಂಗಡಿ:ಉಜಿರೆ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯ ಬೆಳ್ತಂಗಡಿ 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಧರ್ಮಸ್ಥಳ 33/11 ವಿದ್ಯುತ್ ಸರಬರಾಜು ಲೈನಿನ 33 ಕೆವಿ ಧರ್ಮಸ್ಥಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ಜು.3ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30ಗಂಟೆ ತನಕ ವಿದ್ಯುತ್ ನಿಲುಗಡೆಯಾಗಲಿದೆ.
ಧರ್ಮಸ್ಥಳ, ಕನ್ಯಾಡಿ ಪುದುವೆಟ್ಟು,ನಿಡ್ಲೆ, ಪಟ್ರಮೆ,ಅರಸಿನಮಕ್ಕಿ 11ಕೆವಿ ಫೀಡರ್ ನಿಂದ ಸರಬರಾಜಾಗುವ ಸ್ಥಳಗಳಲ್ಲಿ ಈ ಸಮಯ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಉಜೆ ಮೆಸ್ಕಾಂ ಉಪ ವಿಭಾಗದ ಪ್ರಕಟಣೆ ತಿಳಿಸಿದೆ.