Home ಸ್ಥಳೀಯ ಸಮಾಚಾರ ಉದಯ ಮಹಾಸಂಘ ಗಂಡಿಬಾಗಿಲು ಇದರ ವತಿಯಿಂದ ಪರಿಸರ ದಿನಾಚರಣೆ

ಉದಯ ಮಹಾಸಂಘ ಗಂಡಿಬಾಗಿಲು ಇದರ ವತಿಯಿಂದ ಪರಿಸರ ದಿನಾಚರಣೆ

0

ಬೆಳ್ತಂಗಡಿ; ಉದಯ ಮಹಾಸಂಘ ಗಂಡಿಬಾಗಿಲು ಇದರ ಮಹಾಸಭೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜುಲೈ ಒಂದರಂದು ಸಂತ ಥೋಮಸ್ ಚರ್ಚ್ ಸಭಾಂಗಣ ಗಂಡಿಬಾಗಿಲು ಇಲ್ಲಿ ಆಯೋಜಿಸಲಾಗಿತ್ತು. ಉದಯ ಮಹಾಸಂಘದ ಉಪಾಧ್ಯಕ್ಷರಾದ ಏಲಿಯಾಮ್ಮ  ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ವಂ.ಫಾ. ಜೋಸ್ ಆಯಾಂಕುಡಿ, ಸ್ಥಳೀಯ ಧರ್ಮಗುರುಗಳು ಸೈಂಟ್ ತೋಮಸ್ ಚರ್ಚ್ ಗಂಡಿಬಾಗಿಲು ಇವರು ಮಾತನಾಡಿ ಪರಿಸರವನ್ನು ಉಳಿಸಿಕೊಳ್ಳಲು ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಬಿನೋಯಿ ಎ.ಜೆ ಇವರು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಸ್ನೇಹಜ್ಯೋತಿ ತಾಲೂಕು ಒಕ್ಕೂಟ ಅಧ್ಯಕ್ಷರಾದ ಮಂಜುಳಾ ಜೋನ್, ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಎಲಿಯಮ್ಮ ತೋಮಸ್, ಗ್ರಾಮ ಪಂಚಾಯತ್ ಸದಸ್ಯರಾದ ಮರಿಯಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ನಂತರ ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಉಷಾ ಸ್ವಾಗತಿಸಿದರು. ಮಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version