Home ಸ್ಥಳೀಯ ಸಮಾಚಾರ ಖಿಲರ್ ಜುಮ್ಮಾ ಮಸೀದಿ – ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ಜಂಟಿ ಆಶ್ರಯದಲ್ಲಿ ಸಮಸ್ತ ನೂರನೇ...

ಖಿಲರ್ ಜುಮ್ಮಾ ಮಸೀದಿ – ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ಜಂಟಿ ಆಶ್ರಯದಲ್ಲಿ ಸಮಸ್ತ ನೂರನೇ ಸಂಸ್ಥಾಪನ ದಿನಾಚರಣೆ

0

ಬೆಳ್ತಂಗಡಿ (ಜೂ-26) :- ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಸಮಸ್ತ ನೂರನೇ ಸ್ಥಾಪಕ ದಿನವನ್ನು ಖಿಲರ್ ಜುಮ್ಮಾ ಮಸೀದಿ ಇದರ ಉಪಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಯವರು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಖಿಲರ್ ಜುಮ್ಮಾ ಮಸೀದಿ ಇದರ ಮುಖ್ಯ ಖತೀಬರಾದ ಹನೀಫ್ ಪೈಝೀ ಯವರು ದುವಾ ನೆರವೇರಿಸಿ ಸಮಸ್ತ ನಡೆದು ಬಂದ ದಾರಿಯನ್ನು ವಿವರಿಸಿದರು.

ಅದೇ ರೀತಿ ಈ ಬಾರಿಯ ಸಮಸ್ತದ ನೂರನೇ ಶತಮಾನೋತ್ಸವ ಕಾಸರಗೋಡಿನ ಉದ್ಯಮಿಯಾದ ಇಬ್ರಾಹಿಂ ಹಾಜಿ ಕುಣಿಯವರ ವಿಶಾಲವಾದ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಅಹ್ವಾನ ನೀಡಿದರು. ಖಿಲರ್ ಜುಮ್ಮಾ ಮಸೀದಿ ಇದರ ಪ್ರಧಾನ ಕಾರ್ಯದರ್ಶಿ ಗಳಾದ ರಝಾಕ್ ಬಿ.ಎಚ್, ಕಾರ್ಯದರ್ಶಿಗಳಾದ ಮಹಮ್ಮದ್ ಕುದ್ರಡ್ಕ, ಸಮಿತಿ ಸದಸ್ಯರುಗಳಾದ ಅಬ್ದುಲ್ ರಹಮಾನ್, ಬಶೀರ್, ಶರೀಫ್ ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು. ಅಬ್ದುಲ್ ರಹಮಾನ್ ಮದನಿ ಸ್ವಾಗತಿಸಿ, ಅಶ್ರಫ್ ಮುಸ್ಲಿಯಾರ್ ವಂದಿಸಿದರು.

ಮುಖ್ಯೋಪಾಧ್ಯಾಯರಾದ ಸಿದ್ಧಿಕ್ ಅಝ್ಹರಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಖಬರ್ ಝಿಯಾರತ್ ಮಾಡಿ ಸಿಹಿ ತಿಂಡಿ ಹಂಚಿದರು.

NO COMMENTS

LEAVE A REPLY

Please enter your comment!
Please enter your name here

Exit mobile version