
ಬೆಳ್ತಂಗಡಿ; ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡುತ್ತಿದ್ದವೇಳೆ ಬೆಳ್ತಂಗಡಿ ಪೊಲೀಸರು ಪಿಕಪ್ ವಾಹನವೊಂದನ್ನು ವಶಪಡಿಸಿಕೊಂಡು ಪ್ರತಕರಣ ದಾಖಲಿಸಿಕೊಂಡಿದ್ದಾರೆ.
ಲಾಯಿಲದಲ್ಲಿ ಬೆಳ್ತಂಗಡಿ ಠಾಣಾ ಉಪ ನಿರೀಕ್ಷಕರಾದ ಯಲ್ಲಪ್ಪ ಹಚ್ ಅವರು ಜೂನ್ 2ರಂದು ರೌಡ್ಸ್ ನಲ್ಲಿದ್ದಗಾ ಮರಳು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಗಮನಿಸಿದ್ದು ಪರಿಶೀಲಿಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.
ಪಿಕಪ್ ವಾಹನ ಹಾಗೂ ಅದರಲ್ಲಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.