Home ಅಪರಾಧ ಲೋಕ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಸಿದ್ದತೆ

ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಸಿದ್ದತೆ

0

ಬೆಳ್ತಂಗಡಿ; ತಾಲೂಕಿನ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರನ್ನು ಜಿಲ್ಲೆಯಿಂದ ಗಡಿಪಾರು ಮಾಡುವ‌ ಸಲುವಾಗಿ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿರುವುದಾಗಿ ಜಿಲ್ಲಾ ಪೊಲೀಸ್ ಇಲಾಖೆಯವರು ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ ಠಾಣಾ ವ್ಯಪ್ತಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಹಾಗೂ ಮನೋಜ್ ಕುಮಾರ್ ಅವರನ್ನು ಪೂಂಜಾಲಕಟ್ಟೆ ಠಾಣೆಯಲ್ಲಿ ಅಶ್ರಫ್ ಬಿ ಯಾನೆ ಗರಗಸ ಅಶ್ರಫ್
ಹಾಗೂ ಉಪ್ಪಿನಂಗಡಿ ಠಾಣಾವ್ಯಾಪ್ತಿಯಲ್ಲಿ ಅಬ್ದುಲ್ ಅಜೀಜ್ ಯಾನೆ ಕರಾಯ ಅಜೀಜ್, ಸಂತೋಷ್ ಕುಮಾರ್ ರೈ, ಜಯರಾಮ, ಸಂಶುದ್ದೀನ್, ಅಹಮ್ಮದ್ ಶಾಕಿರ್ ಅವರನ್ನು ಸೇರಿದಂತೆ ಜಿಲ್ಲೆಯ ವಿವಿಥ ಠಾಣಾ ವ್ಯಾಪ್ತಿಯ ಒಟ್ಟು 36 ಮಂದಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆಗಳು ಆರಂಭಗೊಂಡಿರುವುದಾಗಿ ಜಿಲ್ಲಾ ಪೊಲೋಸರು ತಿಳಿಸಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version