ಮಂಗಳೂರು; ವಿಟ್ಲ ಠಾಣಾ ವ್ಯಾಪ್ತಿಯ ಬಂಟ್ವಾಳ ನೇರಳಕಟ್ಟೆ ಇಂದಿರಾ ನಗರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ಮಾರಾಟಕ್ಕಾಗಿ ಶೇಖರಿಸಿದ್ದ 1.79 ಲಕ್ಷ ಮೌಲ್ಯದ ಎಂಡಿಎಂಎ ಯನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ಅಶ್ರಪ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತುವಾದ ಎಮ್.ಡಿ.ಎಮ್.ಎ ಯನ್ನು ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ವಿಟ್ಲ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ(ತನಿಖೆ-1) ರತ್ನಕುಮಾರ್ ಎಂ ರವರು ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ, ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಎಂಬಲ್ಲಿ, ಬಂಟ್ವಾಳ ನಿವಾಸಿ ಅಶ್ರಫ್ ಜಿ (38), ಎಂಬಾತನು ವಾಸವಿದ್ದ ಮನೆಗೆ ತೆರಳಿದಾಗ, ಸದ್ರಿ ಆರೋಪಿತನು ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಮತ್ತು ಅಶ್ರಫ್ ಎನ್ ಎ ರವರೊಂದಿಗೆ ಮನೆಯಲ್ಲಿದ್ದು, ಆತನ ಮನೆಯನ್ನು ಪರಿಶೀಲಿಸಿದಾಗ, ಒಟ್ಟು 17.97 ಗ್ರಾಂ ತೂಕದ 1,79,700/ ಅಂದಾಜು ಮೌಲ್ಯದ MDMA ಮಾದಕವಸ್ತು, ಚೂರಿ ಹಾಗೂ ಇತರೆ ಸೊತ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಸ್ವಾಧೀನಪಡಿಸಿ, ಈ ಬಗ್ಗೆ ಅ.ಕ್ರ: 61/2026, ಕಲಂ 8(C), 22(C) NDPS Act Act 1985 ಮತ್ತು ಕಲಂ 27 ಆರ್ಮ್ಸ್ ಅಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
