Home ಸ್ಥಳೀಯ ಸಮಾಚಾರ ಮೇ25 ತಾಲೂಕು ಒಕ್ಕಲಿಗೆ ಗೌಡರ ಸೇವಾ ಟ್ರಸ್ಟ್ ಪದಗ್ರಹಣ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ

ಮೇ25 ತಾಲೂಕು ಒಕ್ಕಲಿಗೆ ಗೌಡರ ಸೇವಾ ಟ್ರಸ್ಟ್ ಪದಗ್ರಹಣ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ

0

ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭ, ಹಾಗೂ ಆಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೇ 25 ನೇ ಆದಿತ್ಯವಾರ ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಲಿದೆ . ಎಂದು ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ, ಕಲ್ಮಂಜ ತಿಳಿಸಿದರು.‌ ಅವರು ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಸಾಮಾಜಿಕ ಚಿಂತನೆಗಳ ಮೂಲಕ ಸಮಾಜಮುಖಿ ಸೇವಾ ಯೋಜನೆಗಳನ್ನು ಮಾಡುವ ಉದ್ದೇಶದಿಂದ ಒಕ್ಕಲಿಗ ಸೇವಾಟ್ರಸ್ಟ್ ಕಾರ್ಯನಿರ್ವಹಿಸಲಿದೆ ಮೇ 25 ರಂದು ಬೆಳಿಗ್ಗೆ 10 ಗಂಟೆಗೆ ದೀಪ ಪ್ರಜ್ವಲನೆ ಮತ್ತು ಆಶೀರ್ವಚನವನ್ನು ಮಂಗಳೂರಿನ ಕಾವೂರು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ, ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ನೆರವೇರಿಸಲಿದ್ದಾರೆ.
ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಮಂಗಳೂರು ಇದರ ಅಧ್ಯಕ್ಷ ಡಿ.ಬಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಪದಗ್ರಹಣ ಕಾರ್ಯಕ್ರಮ, ಆಂಬುಲೆನ್ಸ್ ಲೋಕಾರ್ಪಣೆ, ನಮ್ಮ ಸಮಾಜದ ಆಶಕ್ತರಿಗೆ ಆರ್ಥಿಕ ನೆರವು, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜ ಬಂಧುಗಳಿಗೆ ಸನ್ಮಾನ,ಸಮಾಜದ ನಿವೃತ್ತ ಸೈನಿಕರಿಗೆ ಗೌರವಾರ್ಪಣೆ, ಕಾರ್ಯಕ್ರಮಗಳು ನೆರವೇರಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗ ಸಂಘ ಮಾಜಿ ಅಧ್ಯಕ್ಷರು, ಚನ್ನರಾಯಪಟ್ಟಣ ಶಾಸಕರಾದ ಸಿ.ಎನ್. ಬಾಲಕೃಷ್ಣ, ಶೃಂಗೇರಿ ಶಾಸಕರಾದ ಟಿ.ಡಿ‌. ರಾಜೇಗೌಡ, ಮಾಜಿ ಸಚಿವ ಗಂಗಾಧರ ಗೌಡ, ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಸಂಜೀವ ಮಠಂದೂರು, ಉಮಾಪತಿ ಶ್ರೀನಿವಾಸ ಗೌಡ, ಸೇರಿದಂತೆ ರಾಜ್ಯದ ಅನೇಕ ಒಕ್ಕಲಿಗ ನಾಯಕರು ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.‌ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರುಗಳಾದ ರಂಜನ್. ಜಿ. ಗೌಡ, ವಿಜಯ ಗೌಡ ವೇಣೂರು, ಕಾರ್ಯಾಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು, ಕಾರ್ಯದರ್ಶಿ ಭರತ್ ಗೌಡ ಬಂಗಾಡಿ, ಕೋಶಾಧಿಕಾರಿ ಸೂರಜ್ ಗೌಡ ವಳಂಬ್ರ, ಸ್ಥಾಪಕ ಟ್ರಸ್ಡಿಗಳಾದ ನವೀನ್ ಗೌಡ ಬಿ.ಕೆ. ವಸಂತ ಮರಕಡ, ಮಚ್ಚಿನ, , ಹಾಗೂ ಟ್ರಸ್ಟಿಗಳಾದ  ರಾಜೇಶ್ ಕೆ. ಗೌಡ, ದಿನೇಶ್ ಗೌಡ, ಸುಂದರ ಗೌಡ ಹತ್ಯಡ್ಕ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version