
ಬೆಳ್ತಂಗಡಿ; ಯುವವಾಹಿನಿ (ರಿ) ವೇಣೂರು ಘಟಕದ ಸೇವಾ ಯೋಜನೆ ವತಿಯಿಂದ ಅಂಡಿಂಜೆ ಗ್ರಾಮದ ಕೋಡಿ ದರ್ಖಾಸು ಮನೆಯ ಸುಜಿತ್ ಪೂಜಾರಿಯವರು ಕಾಶೀಪಟ್ಣ ದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ತಲೆಗೆ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಘಟಕದ ವತಿಯಿಂದ ಸೇವಾ ನಿಧಿ ರೂಪಾಯಿ 10,000ಯನ್ನು ಅಧ್ಯಕ್ಷರಾದ ಶುಭಕರ್ ಪೂಜಾರಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ರಿ ಕೇಂದ್ರ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕರಾದ ಅರುಣ್ ಕೋಟ್ಯಾನ್, ನಾಮನಿದೇಶನ ಸದಸ್ಯರಾದ ಸುರೇಶ್ ಅಂಡಿಂಜೆ, ಬೆಳ್ತಂಗಡಿ ಯುವವಾಹಿನಿ ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ ಉಪಸ್ಥಿತರಿದ್ದರು.