Home ಸ್ಥಳೀಯ ಸಮಾಚಾರ ದಯಾ ವಿಶೇಷ ಶಾಲೆಯಲ್ಲಿ ಮಾನಸಿಕ ತಜ್ಞರಿಂದ ಮಾಹಿತಿ ಕಾರ್ಯಕ್ರಮ

ದಯಾ ವಿಶೇಷ ಶಾಲೆಯಲ್ಲಿ ಮಾನಸಿಕ ತಜ್ಞರಿಂದ ಮಾಹಿತಿ ಕಾರ್ಯಕ್ರಮ

0

ಬೆಳ್ತಂಗಡಿ; ದಯಾ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳ ಪೋಷಕರಿಗಾಗಿ ಮಾಹಿತಿ ಕಾರ್ಯಕ್ರಮ ಹಾಗೂ ಪೋಷಕರ ಸಭೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಅಶ್ವಿತಾ ಮೆಲ್ರಿನ್‌ ಕಾರ್ಲ್‌, ಅಸಿಸ್ಟೆಂಟ್ ಪ್ರೊಫೆಸರ್, ಫಾ.ಮುಲ್ಲರ್ಸ್ ಆಸ್ಪತ್ರೆ, ಮಂಗಳೂರು, ಶಾಲೆಯ ಆಪ್ತಸಮಾಲೋಚಕರಾದ ಮಿಸ್.‌ ಮೆರಿನ್‌ ಹಾಗೂ ಪೋಷಕ ಪ್ರತಿನಿಧಿಯಾಗಿ ಮಿಸ್.ಸುಮಲತಾ ರವರು ಉಪಸ್ಥಿತರಿದ್ದರು. ಡಾ.ಅಶ್ವಿತಾ ಮೆಲ್ರಿನ್‌ ಕಾರ್ಲ್‌ ರವರು ವಿಶೇಷ ಮಕ್ಕಳು ತಮ್ಮ ಜೀವನದಲ್ಲಿ ಎದುರಿಸಬಹುದಾದ ವಿವಿಧ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳು, ಅವುಗಳ ಚಿಕಿತ್ಸೆ, ತಮ್ಮ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಪೋಷಕರು ಅನುಸರಿಸಲೇಬೇಕಾದ ಕೆಲವು ಮಾರ್ಗನಿರ್ದೇಶನಗಳ ಕುರಿತು, ವಿಶೇಷ ಮಕ್ಕಳಿಗೆ ವಿಶೇಷ ಶಿಕ್ಷಣದ ಮಹತ್ವ, ಮಾನಸಿಕ ರೋಗಗಳ ಚಿಕಿತ್ಸೆಯ ಉದ್ದೇಶ ಮತ್ತು ಅದರ ಪ್ರಯೋಜನಗಳ ಬಗ್ಗೆ ಶಾಲಾ ಮಕ್ಕಳ ಪೋಷಕರಿಗೆ ಮಾಹಿತಿಯನ್ನು ನೀಡಿ, ಪೋಷಕರೊಂದಿಗೆ ಸಮಾಲೋಚನೆಯನ್ನು ನಡೆಸಿ ಸೂಕ್ತ ಮಾರ್ಗದರ್ಶನವನ್ನು ನೀಡಿದರು. ನಂತರ ಮಿಸ್.‌ ಮೆರಿನ್‌ ರವರು 2024-2025 ರ ಶಾಲಾ ಕಾರ್ಯಕ್ರಮಗಳ ಮೌಲ್ಯಮಾಪನವನ್ನು ನಡೆಸಿ, ಪೋಷಕರಿಂದ ಸಲಹೆ ಸೂಚನೆಗಳನ್ನು ಪಡೆಯುವುದರೊಂದಿಗೆ ಮುಂಬರುವ ವರ್ಷದ ಕಾರ್ಯ ವಿಧಾನಗಳನ್ನು ಚರ್ಚಿಸಿದರು. ತರಗತಿವಾರು ಮಕ್ಕಳ ಪ್ರಗತಿಯನ್ನು ಶಿಕ್ಷಕರೊಂದಿಗೆ ಚರ್ಚಿಸಿ, ಮನೆಯಲ್ಲಿ ಮಕ್ಕಳ ಶೈಕ್ಷಣಿಕ ಮತ್ತು ಇನ್ನಿತರ ಚಿಕಿತ್ಸೆಗಳ ಅನುಸರಣೆಯನ್ನು ಮಾಡುವ ಕುರಿತಾಗಿ ಪೋಷಕರಿಗೆ ತಿಳಿಸಲಾಯಿತು. ಮಿಸ್.‌ ಮೆರಿನ್‌ ರವರು ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version