
ಬೆಳ್ತಂಗಡಿ; ದಲಿತ ಸಂಘರ್ಷ ಸಮಿತಿ ಹುಟ್ಟಿಕೊಂಡದ್ದು ಕೇವಲ ಒಂದು ಸಮುದಾಯಕ್ಕಾಗಿ ಅಲ್ಲ ಅದು ಸಮಸ್ತ ಶೋಷಿತರ ಸಂಘಟನೆಯಾಗಿದೆ. ದಲಿತ ಚಳವಳಿ ಇಂದು ತಮ್ಮೊಳಗಿನ ಒಡಕುಗಳನ್ನು ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಸಂಘಟನೆಯನ್ನು ಕಟ್ಟಿದವರು ಕಂಡಿದ್ದ ಕನಸು ಈಡೇರಲು ಸಾಧ್ಯವಿದೆ ಎಂದು ವಿಶ್ವ ಮೈತ್ರಿ ಬೌದ್ದವಿಹಾರ ಮೈಸೂರಿನ ಡಾ. ಕಲ್ಯಾಣಸಿರಿ ಭಂತೇಜಿ ಹೇಳಿದರು.
ಅವರು ಬೆಳ್ತಂಗಡಿ ಯಲ್ಲಿ ಸೋಮವಾರ ಕರ್ನಾಟಕದ ದಲಿತ ಚಳವಳಿ 50ರ ಸಂಭ್ರಮ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ದಲಿತ ಚಳವಳಿ ಬೆಳೆದು ಬಂದ ಇತಿಹಾಸವನ್ನು ವಿವರಿಸಿದ ಅವರು ಚಳವಳಿ ಕರ್ನಾಟಕದಲ್ಲಿ ಹಲವಾರು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗಿರುವುದನ್ನು ವಿವರಿಸಿದರು. ಅಂಬೇಡ್ಕರ್ ಅವರು ನೀಡಿದ ಮೀಸಲಾತಿಯಿಂದ ದಲಿತ ಸಮುದಾಯಕ್ಕೆ ಒಂದಿಷ್ಟು ರಾಜಕೀಯ ಅವಕಾಶಗಳು ಸಿಕ್ಕಿದೆ ಆದರೆ ಇಂದಿಗೂ ಧಾರ್ಮಿಕವಾಗಿ ಸಾಮಾಜಿಕವಾಗಿ ಸಮಾನತೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಅದಯ ಸಾಧ್ಯವಾಗಬೇಕಾದರೆ ಭಾರತದ ಜನರಾದ ನಾವು ಸಹೋದರತೆಯ ಬದುಕು ಕಲಿಯಬೇಕಾಗಿದೆ. ಸಹೋದರೆತ ಕಲಿತರೆ ಮಾತ್ರ ಸಮಾನತೆ ಲಭಿಸಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಬೆಳ್ತಂಗಡಿ ಯಲ್ಕಿ ಸುಸಜ್ಜಿತವಾದ ಅಂಬೇಡ್ಕರ್ ಭವನದ ನಿರ್ಮಾಣ ಕಾರ್ಯಕ್ಕೆ ಜಮೀನು ಒದಗಿಸಲಾಗಿದೆ, ಹಿಂದಿನ ಸರಕಾರದ ಅವಧಿಯಲ್ಲಿ ಮಂಜೂರಾಗಿದ್ದ ಅನುದಾನ ಇನ್ನೂ ಬಂದಿಲ್ಲ ಈ ಬಗ್ಗೆ ಕಳೆದ ಅಧಿವೇಶನದ ಸಂದರ್ಭದಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಮಾತನಾಡಿದ್ದೇನೆ ಅನುದಾನ ಲಭಿಸುವ ವಿಶ್ವಾಸವಿದೆ ಎಂದರು.
ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ
ಮೀಸಲಾತಿ ಎಂಬುದು ಯಾವುದೇ ಭಿಕ್ಷೆ ಯಲ್ಲಿ ಅದು ಶೋಷಿತರ ಹಕ್ಕಾಗಿದೆ ಅದರ ಪ್ರಯೋಜನವನ್ನು ಸಾಧ್ಯವಾದಷ್ಟು ಪಡೆದುಕೊಳ್ಳಬೇಕು.
ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಮುಂದೆ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಬೇಕು ಅದಕ್ಕಾಗಿ ಸರಕಾರದ ಮಟ್ಟದಲ್ಲಿ ಸಚಿವರುವಳೊಂದಿಗೆ ಮಾತುಕತೆ ನಡೆಸಿ ಕೂಡಲೇ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿ ಅಧ್ಯಕ್ಷ ಬಿ.ಕೆ ವಸಂತ್ ಮಾತನಾಡಿ ರಾಜ್ಯದಲ್ಲಿ ದಲಿತ ಚಳವಳಿ ಬೆಳೆದು ಬಂದ ಹಿನ್ನಲೆಯನ್ನು ತಿಳಿಸಿ ಮುಂದಿನ ದಿನಗಳಲ್ಲಿ ದಲಿತ ಚಳವಳಿ ರಾಜ್ಯದಲ್ಲಿ ಹೊಸ ಬದಲಾವಣೆಗಳಿಗೆ ಕಾರಣವಾಗಬೇಕು ಅದಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸುಳ್ಯ ಶಾಸಕಿ ಭಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್,
ಮೈಸೂರಿನ ನಿವೃತ್ತ ಡಿ.ವೈ.ಎಸ್.ಪಿ. ಸುಹೈಲ್ ಅಹಮದ್, ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ ಉರುವಾಲು
ಮಾತನಾಡಿ ಶುಭ ಹಾರೈಸಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಅಪರ ಸರಕಾರಿ ವಕೀಲರು ಮನೋಹರ್ ಕುಮಾರ್ ಎ.,ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಪ.ಪಂ. ಉಪಾಧ್ಯಕ್ಷೆ ಗೌರಿ, ತಾಲೂಕು ವಕೀಲರ : ಸಂಘದ ಅಧ್ಯಕ್ಷ ವಸಂತ ಮರಕಡ, ಸಮಿತಿಯ ಗೌರವ ಅಧ್ಯಕ್ಷ ಚೆನ್ನಕೇಶವ ಬೆಳ್ತಂಗಡಿ, ದ.ಸಂ.ಸ ದ ಮಾಜಿ ತಾಲೂಕು ಸಂಚಾಲಕರುಗಳಾದ ಎಸ್.ಬೇಬಿ ಸುವರ್ಣ, ಪದ್ಮನಾಭ ಗರ್ಡಾಡಿ, ಎನ್.ಕೆ.ಸುಂದರ್ ಲ್ಯಾಲ, ಅಣ್ಣು ಸಾಧನಾ ಪದ್ಮುಂಜ, ಪಿ.ಕೆ.ರಾಜು, ಪಡಂಗಡಿ, ಕಿರಣ್ ಕುಮಾರ್, ಪುದುವೆಟ್ಟು ಶ್ರೀಧರ್ ಎಸ್. ಕಳೆಂಜ, ವೆಂಕಣ್ಣ ಕೊಯ್ಯರು, ಕೆ.ನೇಮಿರಾಜ್, ಕಿಲ್ಲೂರು, ರಮೇಶ್ ಆರ್. ಬೆಳ್ತಂಗಡಿ ರಮೇಶ್ ಉಮಿಯ, ಸಂಜೀವ ಆರ್. ಬೆಳ್ತಂಗಡಿ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಟ, ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ, ದ.ಕ ದಸಂಸ ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ್, ಪ್ರೆಮಿ ಫೆರ್ನಾಂಡಿಸ್ ಜಿಲ್ಲಾ ಪ್ರಧಾನ ಸಂಚಾಲಕರು, ಮ.ಬಂ.ವೇದಿಕೆ, ಸಂತೋಷ್ ಕುಮಾರ್.ಜಿಲ್ಲಾ ಕೆ.ಡಿ.ಪಿ.ಸದಸ್ಯರು,
ಗೋಪಾಲ್ ಮುತ್ತೂರು ಜಿಲ್ಲಾ ಅಧ್ಯಕ್ಷರು ಬಿಎಸ್‌ಪಿ ಮಂಗಳೂರು, ರಾಜಾ ಚಂಡ್ತಿಮಾರ್ ಜಿಲ್ಲಾ ಗೌರವಾಧ್ಯಕ್ಷರು, ಸಮಾನ ಮನಸ್ಕ ಸಂಘಟನೆ, ಮಂಗಳೂರು, ನಾಗೇಶ್ ಕುಮಾರ್ ಗೌಡ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ, ಬೆಳ್ತಂಗಡಿ (ಗ್ರಾಮೀಣ), ಶಿವಕುಮಾರ್ ಹಿರಿಯ ನ್ಯಾಯವಾದಿಗಳು ಬೆಳ್ತಂಗಡಿ, ಶೇಖರ ಕುಕ್ಕೇಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ ಕುಕ್ಕೇಡಿ, ಪಿ.ಎಸ್.ಶ್ರೀನಿವಾಸ್ ಅಧ್ಯಕ್ಷರು, ಬಿಎಸ್‌ಪಿ, ಬೆಳ್ತಂಗಡಿ, ಅಕ್ಟರ್ ಬೆಳ್ತಂಗಡಿ ಅಧ್ಯಕ್ಷರು, ಎಸ್.ಡಿ.ಪಿ.ಐ. ಬೆಳ್ತಂಗಡಿ, ಜಯಕೀರ್ತಿ ಜೈನ್ ಧರ್ಮಸ್ಥಳ ಮಾಜಿ ಅಧ್ಯಕ್ಷರು, ಸರಕಾರಿ ನೌಕರರ ಸಂಘ ಬೆಳ್ತಂಗಡಿ, ರಘು ಧರ್ಮಸೇನ್ ಉಪನ್ಯಾಸಕರು ಮಂಗಳೂರು ವಿಶ್ವವಿದ್ಯಾಲಯ, ಶೀನ ಬಂಗೇರ ಲಾಯಿಲ ನಿವೃತ್ತ ಸಿಬ್ಬಂದಿ, ಶಿಕ್ಷಣ ಇಲಾಖೆ, ಶೇಖರ್ ಎಲ್. ಪದ್ಮನಾಬ್ ಸಾಲ್ಯಾನ್ ಅಧ್ಯಕ್ಷರು ಗ್ಯಾರಂಟಿ ಸಮಿತಿ, ನಜೀರ್ ಅಧ್ಯಕ್ಷರು ತಾಲೂಕು ಮಸ್ಲಿಂ ಒಕ್ಕೂಟ ಬೆಳ್ತಂಗಡಿ, ಈಶ್ವರ ಬೈರ ಅಧ್ಯಕ್ಷರು ಎಸ್ಸಿ ಮೋರ್ಚಾ ಬಿ.ಜೆ.ಪಿ.ಮಂಡಲ, ಬೆಳ್ತಂಗಡಿ, ಸಿ.ಕೆ ಚಂದ್ರಕಲಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಸುಕೇಶ್ ಮಾಲಾಡಿ ಸ್ವಾಗತಿಸಿದರು.
ಬಳಿಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಗಳಾದರು.