
ಬೆಳ್ತಂಗಡಿ: ನಗರದ ಇಲ್ಲಿಯ ಸಂತೆಕಟ್ಟೆ ಬಳಿ ಖಾಸಗಿ ತೋಟದ ಬಾವಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಎ.24) ರಂದು ನಡೆದಿದೆ.
ಮೃತ ವ್ಯಕ್ತಿ ಬೆಳ್ತಂಗಡಿ ಅಲ್ಲಾಟ ಬೈಲು ನಿವಾಸಿ ಪಟ್ಟಣ ಪಂಚಾಯತು ಮಾಜಿ ಅಧ್ಯಕ್ಷೆ ವೀಣಾ ರವರ ಪತಿ ವಿನೋದ್ (48) ರವರು ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.