

ಬೆಳ್ತಂಗಡಿ: ಹೊಸಂಗಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಮಳೆಯೊಂದಿಗೆ ಬೀಸಿದ ಭಾರಿ ಗಾಳಿಗೆ ಹಲವೆಡೆ ಹಾನಿ ಸಂಭವಿಸಿದೆ.
ದೇರಾರ್ ಶಾರದಾ ಪೂಜಾರಿ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿ ಉಂಟಾಗಿ ದೆ.ಇನ್ನೊಂದು ತೆoಗಿನ ಮರ ಬಚ್ಚಲು ಕೊಟ್ಟಿಗೆಗೆ ಬಿದ್ದು ಅದು ಧರಾಶಾಯಿ ಆಗಿದೆ.

ಪ್ರಶಾಂತ್ ಎಂಬವರ ಮನೆಯ 20 ಶೀಟ್ ಗಳು ಗಾಳಿಗೆ ಹಾರಿ ಹೋಗಿ ಹಾನಿಯಾಗಿದೆ,.ಕೇಶವ ಎಂಬವರ ಮನೆಯ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ. ನೂರಾರು ಅಡಕೆ ರಬ್ಬರ್ ಮರಗಳು ಮುರಿದು ಬಿದ್ದಿವೆ.
ಪಿಡಿಒ ಗಣೇಶ್ ಶೆಟ್ಟಿ, . ಈ ಸಂದರ್ಭ ಜಿಪಂ ಮಾಜಿ ಸದಸ್ಯ ಧರಣೇoದ್ರ ಕುಮಾರ್ ಹಾಗೂ ಇತರರು ಭೇಟಿ ನೀಡಿ ಹಾನಿ ವಿವರ ಸಂಗ್ರಹಿಸಿದ್ದಾರೆ.
ಸ್ಥಳೀಯರಾದ ಚಂದ್ರಶೇಖರ ಚಂದ್ರಕಾಂತ್, ಕೇಶವ, ದಿನೇಶ್, ಭರತ್,ಸುದರ್ಶನ್ ಪಿಲಂಬು ಸಹಕರಿಸಿದರು.
