


ಬೆಳ್ತಂಗಡಿ; ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಸಮೀಪದ ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.
ಗುಡ್ಡಕ್ಕೆ ಬೆಂಕಿ ಬಿದ್ದ ಕುರಿತು ಸ್ಥಳೀಯ ಕೃಷಿಕ ಆದರ್ಶ್ ಕೊರೆಯ ಎಂಬವರು ಗಮನಿಸಿದ್ದು ಕೂಡಲೇ ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ ರವರಿಗೆ ತಿಳಿಸಿದರು. ಆವರು ಕೂಡಲೇ ಅಗ್ನಿಶಾಮಕ ದಳದವರಿಗೆ,ಅರಣ್ಯ ಇಲಾಖೆಯವರಿಗೆ,ಗ್ರಾಮ ಪಂಚಾಯತ್ ಗೆ ತಿಳಿಸಿದ್ದು ಕೂಡಲೇ ಅಗ್ನಿಶಾಮಕ ದಳದವರೊಂದಿಗೆ ಅರಣ್ಯ ಇಲಾಖೆಯಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಬೆಂಕಿ ನಂದಿಸಲು ಸಹಕರಿಸಿದರು. ಸ್ಥಳೀಯರೂ ಇಲಾಖೆಯವರೊಂದಿಗೆ ಸಹಕರಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿದರು.
