Home ಅಪಘಾತ ಮುಂಡಾಜೆ- ಧರ್ಮಸ್ಥಳ ರಸ್ತೆಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ

ಮುಂಡಾಜೆ- ಧರ್ಮಸ್ಥಳ ರಸ್ತೆಯಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ

18
0

ಬೆಳ್ತಂಗಡಿ;  ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ- ಧರ್ಮಸ್ಥಳ ರಸ್ತೆಯ ಕೊಂಬಿನಡ್ಕ ಶಾಲೆ ಸಮೀಪದ ಕೆದಿಹಿತ್ಲು ಎಂಬಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಧರ್ಮಸ್ಥಳದಿಂದ ಮುಂಡಾಜೆಯತ್ತ ಸಂಚರಿಸುತ್ತಿದ್ದ ಕಾರು ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ನಡೆದಿದೆ. ಘಟನೆಯಲ್ಲಿ ಎರಡು ಕಾರುಗಳಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಕಾರು ಮೋರಿಯಲ್ಲಿ ಸಿಲುಕದೆ ಕೆಳಗಡೆ ಹರಿಯುವ ಹಳ್ಳಕ್ಕೆ ಬೀಳುತ್ತಿದ್ದರೆ ಅಪಾಯ ಎದುರಾಗುವ ಸಾಧ್ಯತೆ ಇತ್ತು.
ಈ ರಸ್ತೆಯಲ್ಲಿ ಸುಮಾರು 6 ಕಡೆ ಅಗಲ ಕಿರಿದಾಗ ಕಿರುಸೇತುವೆಗಳಿದ್ದು ಇವು ಅಪಾಯಕಾರಿಯಾಗಿವೆ.

LEAVE A REPLY

Please enter your comment!
Please enter your name here