Home ಅಪಘಾತ ನಾರಾವಿ; ಭೀಕರ ಅಪಘಾತ ಇಬ್ಬರು ಸ್ಥಳದಲ್ಲಿಯೇ ಸಾವು

ನಾರಾವಿ; ಭೀಕರ ಅಪಘಾತ ಇಬ್ಬರು ಸ್ಥಳದಲ್ಲಿಯೇ ಸಾವು

101
0

ಬೆಳ್ತಂಗಡಿ; ನಾರಾವಿ ಕುತ್ಲೂರಿನಲ್ಲಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ.
ಶುಕ್ರವಾರ ತಡ ರಾತ್ರಿಯ ವೇಳೆ ಅಪಘಾತ ಸಂಭವಿಸಿದೆ.
ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಶಾಂತ್ ಹಾಗೂ ದಿನೇಶ್ ಎಂಬವರೇ ಮೃತ ವ್ಯಕ್ತಿಗಳಾಗಿದ್ದಾರೆ. ಕುತ್ಲೂರು ಗ್ರಾಮದ ಪುರುಷ ಗುಡ್ಡೆ ಎಂಬಲ್ಲಿ ಕೊಕ್ರಾಡಿ ನಾರಾವಿ ರಸ್ತೆಯಲ್ಲಿ  ಪ್ರಶಾಂತ್ ಚಲಾಯಿಸುತ್ತಿದ್ದ ಬೈಕ್
ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದ್ದು ಗಂಭೀರವಾಗಿ ಗಾಯಗೊಂಡ ಇಬ್ಬರು ಪ್ರಯಾಣಿಕರೂ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ರಾತ್ರಿಯ ವೇಳೆ ಯಾವುದೋ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ವೇಳೆ ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ವೇಣೂರು ಪೋಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here