Home ಸ್ಥಳೀಯ ಸಮಾಚಾರ ಖ್ಯಾತ ನ್ಯಾಯವಾದಿ ಜೆ.ಕೆ ಪೌಲ್ ನಿಧನ

ಖ್ಯಾತ ನ್ಯಾಯವಾದಿ ಜೆ.ಕೆ ಪೌಲ್ ನಿಧನ

0

ಬೆಳ್ತಂಗಡಿ: ಖ್ಯಾತ ವಕೀಲರಾದ ಜೆ.ಕೆ. ಪೌಲ್ (55) ಅವರು ಎ.8ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ನಿಧನ ಹೊಂದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಕರಂಬಾರು ನಿವಾಸಿಯಾಗಿದ್ದ ಅವರು ಕಾರ್ಕಳದಲ್ಲಿ ವಾಸವಾಗಿದ್ದರು.ಮೃತ ದೇಹ ಶಿರ್ಲಾಲು ಮನೆಗೆ ತರಲಾಗಿದ್ದು ಇಂದು ಅಂತ್ಯ ಕ್ರಿಯೆ ಸ್ಥಳೀಯ ಚರ್ಚ್ ನಲ್ಲಿ ನಡೆಯಲಿದೆ. ಸರಳ ವ್ಯಕ್ತಿತ್ವ ಹಾಗೂ ಎಲ್ಲರಲ್ಲೂ ಸ್ನೇಹದಿಂದಿರುತ್ತಿದ್ದ ಅವರು ಪತ್ನಿ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version