
ಬೆಳ್ತಂಗಡಿ; ತಾಲೂಕಿನ ಹಲವೆಡೆ ಮಂಗಳವಾರ ಅಪರಾಹ್ನ ಭಾರೀ ಗಾಳೊ ಬೀಸಿದ್ದು ವ್ಯಾಪಕ ಹಾನಿ ಸಂಭವಿಸಿದೆ.
ಕಕ್ಕಿಂಜರ ಪರಿಸರದಲ್ಲಿ ಗಾಳಿಯ ತೀವ್ರತೆ ತೀರಾ ಹೆಚ್ಚಾಗಿತ್ತು.
ಕಕ್ಕಿಂಜೆ ಕತ್ತರಿಗುಡ್ಡೆ ಪರಿಸರದಲ್ಲಿ ಭಾರೀ ಗಾತ್ರದ ಮರವೊಂದು ಮನೆ ಮೇಲೆ ಮುರಿದು ಬಿದ್ದು ಮನೆಗೆ ಹಾನಿ ಸಂಭವಿಸಿದೆ. ಕಕ್ಕಿಂಜೆ ಪೇಟೆಯಲ್ಲಿಯೂ ಗಾಳಿಯ ಅಬ್ಬರಕ್ಕೆ ಎರಡು ಅಂಗಡಿಗಳಿಗೆ ಹಾನಿ ಸಂಭವಿಸಿದೆ.
ಕನ್ಯಾಡಿ ಗ್ರಾಮದ ಪಾರ್ನಡ್ಕದಲ್ಲಿ ಗಾಳಿಯ ಅಬ್ಬರಕ್ಕೆ ಮನೆಯೊಂದರ ಶೀಟು ಹಾರಿ ಹೋಗಿದೆ. ಅಲ್ಲಲ್ಲಿ ಮರಗಳು ಮುರಿದು ಬಿದ್ದಿದೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.