ಬೆಳ್ತಂಗಡಿ; ದಿಡುಪೆ ಸಮೀಪ ಸಿಂಗನಾರುವಿನಲ್ಲಿ ವ್ಯಕ್ತಿಯೊಬ್ಬ ಮನೆಯ ಸಮೀಪದ ಮರದಿಂದ ಜೀಗುಜ್ಜೆ ಕೀಳುತ್ತಿದ್ದ ವೇಳೆ ಜಾರಿ ಬಿದ್ದು ಕಲ್ಲಿಗೆ ತಲೆ ತಾಗಿ ಗಾಯಗೊಂಡು ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಮೃತ ವ್ಯಕ್ತಿ ಸಿಂಗನಾರು ನಿವಾಸಿ ಶ್ರೀನಿವಾಸ (41) ಎಂಬವರಾ ಗಿದ್ದಾರೆ.
ಮನೆಯಿಂದ ಹೊರಗೆ ಹೋದ ಇವರು ಹಿಂತಿರುಗಿ ಬಾರದ ಹಿನ್ನಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ತೋಟದ ಬದಿಯಲ್ಲಿ ಜೀಗುಜ್ಜೆ ಮರದ ಕೆಳಗೆ ಗಂಭಿರವಾಗಿ ಗಾಯಗೊಂಡು ಬಿದ್ದಿರುವುದು ಕಂಡುಬಂದಿದೆ ಕೂಡಲೇ ಅವರನ್ನು ಆಸ್ಪತ್ರೆಗೆ ತಂದರೂ ಆವೇಳೆಗೆ ಅವರು ಮೃತಪಟ್ಟಿದ್ದರು.
ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಬೆಳಕಿನ ಪೊಲೋಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.
