Home ಅಪರಾಧ ಲೋಕ ಬೆಳ್ತಂಗಡಿ; ಅಕ್ರಮ ಸಕ್ರಮ ಜಮೀನು ಮಂಜೂರು ಮಾಡಿಸುವುದಾಗಿ ರೂ 4.95ಲಕ್ಷ ಪಡೆದು ವಂಚನೆ; ಮೂಡು ಕೋಡಿ...

ಬೆಳ್ತಂಗಡಿ; ಅಕ್ರಮ ಸಕ್ರಮ ಜಮೀನು ಮಂಜೂರು ಮಾಡಿಸುವುದಾಗಿ ರೂ 4.95ಲಕ್ಷ ಪಡೆದು ವಂಚನೆ; ಮೂಡು ಕೋಡಿ ವಿ.ಎ ಸುದೇಶ್ ಕುಮಾರ್ ವಿರುದ್ದ ಪ್ರಕರಣ ದಾಖಲು

0

ಬೆಳ್ತಂಗಡಿ; ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.95 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಮೂಡುಕೋಡಿ ಗ್ರಾಮದ ಗ್ರಾಮ‌ಕರಣಿಕ ಸುದೇಶ್ ಕುಮಾರ್ ಹಾಗೂ ಅವರ ಪತ್ನಿ ಮೀನಾಕ್ಷಿ ಅವರ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ನಿವಾಸಿ ರೋಯಿ ವರ್ಗೀಸ್ ಎಂಬವರೇ ದೂರು ನೀಡಿದವರಾಗಿದ್ದಾರೆ.
ರೋಯಿ ವರ್ಗೀಸ್ ಅವರು ಮೂಡುಕೋಡಿ ಗ್ರಾಮದಲ್ಲಿ ಪಟ್ಟಾ ಜಮೀನು ಹೊಂದಿದ್ದು ಅದಕ್ಕೆ ತಾಗಿಕೊಂಡಿರುವ ಕುಮ್ಕಿ ಜಮೀನಿಗೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದರು. ಜಾಗ ಅಳತೆ ಮಾಡಿದ ಸುದೇಶ್ ಕುಮಾರ್ ಅವರು ಕಡತ ತಯಾರಿಸಿ ಅಕ್ರಮಸಕ್ರಮದಲ್ಲಿ ಮಂಜೂರುಗೊಳಿಸಿ ಕೊಡುವುದಾಗಿ ಹೇಳಿ ಲಂಚದ ಬೇಡಿಕೆ ಮುಂದಿಟ್ಟಿದ್ದರು. ಅದರಂತೆ ವಿವಿಧ ಸಂದರ್ಭಗಳಲ್ಲಿ 4,55,000 ‌ಸುದೇಶ್ ಅವರ ಹಾಗೂ ಪತ್ನಿ ಮೀನಾಕ್ಷಿ ಅವರ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಅಲ್ಲದೆ ರೂ 40ಸಾವಿರವನ್ನು ನಗದಾಗಿ ಪಡೆದಿದ್ದಾರೆ ಆದರೆ ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರಾಗದ ಹಿನ್ನಲೆಯಲ್ಲಿ ರೋಯಿ ಅವರು ಪ್ರಶ್ನಿಸಿದಾಗ ಹಣವನ್ನೂ ವಾಪಾಸ್ ನೀಡದೆ ವಂಚಿಸುದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದ್ದು ಅದರಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಸುದೇಶ್ ಕುಮಾರ್, ಅವರ ಪತ್ನಿ ಮೀನಾಕ್ಷಿ ಅವರ ವಿರುದ್ದ ಕಲಂ 417,420,IPC ಯಂತೆ ಪ್ರಕರಣ‌ ದಾಖಲಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version