Home ಅಪರಾಧ ಲೋಕ ಬೆಳ್ತಂಗಡಿ : ಅಕ್ರಮ ಮರಳು ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸ್ ದಾಳಿ ಲಕ್ಷಾಂತರ ಮೌಲ್ಯದ ಸೊತ್ತುಗಳು...

ಬೆಳ್ತಂಗಡಿ : ಅಕ್ರಮ ಮರಳು ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸ್ ದಾಳಿ ಲಕ್ಷಾಂತರ ಮೌಲ್ಯದ ಸೊತ್ತುಗಳು ವಶಕ್ಕೆ

0

ಬೆಳ್ತಂಗಡಿ : ಅಕ್ರಮವಾಗಿ ಯಾವುದೇ ಸರಕಾರಕ್ಕೆ ರಾಜಧನ ಕಟ್ಟದೆ ನದಿಯ ಕಿನಾರೆಯಿಂದ ಹಿಟಾಚಿ ಬಳಸಿ ಮರಳು ತೆಗೆಯುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ಪೊಲೀಸರು ಜ.8 ರಂದು ಬೆಳಗ್ಗೆ 7 ಗಂಟೆಗೆ ಸಿಬ್ಬಂದಿಯವರ ಜೊತೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ರೌಂಡ್‌ ಕರ್ತವ್ಯದಲ್ಲಿರುವಾಗ ಮಾಹಿತಿದಾರರಿಂದ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಡಿರುದ್ಯಾವರ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ದಾಳಿ ಮಾಡಿದಾಗ ನೇತ್ರಾವತಿ ನದಿ ಕಿನಾರೆಯಿಂದ ಮರಳು ಕಳ್ಳತನ ಮಾಡಿ ಹಿಚಾಚಿ ಮೂಲಕ ಟಿಪ್ಪರ್ ಲಾರಿಗೆ ತುಂಬಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ದಾಳಿ ವೇಳೆ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಲಾರಿ ಬಿಟ್ಟು ಓಡಿ ಹೋಗಿದ್ದು, ಹಿಟಾಚಿ ಅಪರೇಟರ್ ನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಚಾರ್ಮಡಿಯ ಮಹಮ್ಮದ್ ಶಮೀರುದ್ದಿನ್ ಎಂಬುದಾಗಿ ಹಾಗೂ ಓಡಿ ಹೋದ ಟಿಪ್ಪರ್ ಚಾಲಕ ನ ಹೆಸರು ಚಾರ್ಮಾಡಿಯ ಹೆಚ್.ಹನೀಫ್ ಎಂಬುದಾಗಿ ತಿಳಿಸಿದ್ದಾನೆ.ಬೆಳ್ತಂಗಡಿ ಪೊಲೀಸರಿಗೆ ತಿಳಿಯದಂತೆ ಹಲವು ಸಮಯಗಳಿಂದ ಕದ್ದುಮುಚ್ಚಿ ರಾಜರೋಷವಾಗಿ ಆರೋಪಿ ಇದೆ ಸ್ಥಳದಿಂದ ಸರಕಾರದ ಬೊಕ್ಕಸಕ್ಕೆ ವಂಚನೆ ಮಾಡಿ ಮರಳು ಕಳ್ಳತನ ಮಾಡುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ.

ಅಕ್ರಮವಾಗಿ ಮರಳು ತುಂಬಿದ್ದ 3,50,000 ಮೌಲ್ಯದ ಟಿಪ್ಪರ್ KA-41-C-0057 ಮತ್ತು 2,50,000 ಮೌಲ್ಯದ
DOOSAN HITACHI- 150 ವಶಪಡಿಸಿಕೊಂಡು.ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದ ಚಾರ್ಮಾಡಿ ನಿವಾಸಿಗಳಾದ ಮಹಮ್ಮದ್ ಶಮೀರುದ್ದಿನ್ ಮತ್ತು ಹೆಚ್.ಹನೀಫ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2023(u/s303(2),3,(5)) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪೂರ ಮಠ್ ನೇತೃತ್ವದಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಂ ತಂಡದ ಸಿಬ್ಬಂದಿ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version