Home ರಾಜಕೀಯ ಸಮಾಚಾರ ವೇಣೂರು- ಪೆರ್ಮುಡಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ರಕ್ಷಿತ್ ಶಿವರಾಂ ಆಯ್ಕೆ,

ವೇಣೂರು- ಪೆರ್ಮುಡಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ರಕ್ಷಿತ್ ಶಿವರಾಂ ಆಯ್ಕೆ,

0

ಬೆಳ್ತಂಗಡಿ.32ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳಕೂಟ
ದಿನಾಂಕ 30/3/2025ನೇ ಆದಿತ್ಯವಾರ ನಡೆಯಲಿದ್ದು. ಇದರ ಪದಾಧಿಕಾರಿಗಳ ಸಭೆಯು ದಿನಾಂಕ 3/3/2025 ನೇ ಸೋಮವಾರದಂದು ಕಂಬಳ ಸಮಿತಿಯ ಅಧ್ಯಕ್ಷರಾದ ನಿತೀಶ್ ಎಚ್ ಕೋಟ್ಯಾನ್ ರ ಅಧ್ಯಕ್ಷತೆಯಲ್ಲಿ ಜರಗಿತು. ಸುದೀರ್ಘ 31ವರ್ಷಗಳಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ದಿ. ಕೆ ವಸಂತ ಬಂಗೇರ ರವರು ಸೇವೆ ಸಲ್ಲಿಸಿದ್ದು. ಮುಂದಕ್ಕೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರನ್ನು ಆಯ್ಕೆ ಮಾಡಲಾಯಿತು.

ಗೌರವ ಮಾರ್ಗದರ್ಶಕರಾಗಿ ಶ್ರೀಮತಿ ಸುಜಿತಾ ವಸಂತ ಬಂಗೇರ ರವರನ್ನು ಮತ್ತು ಅಧ್ಯಕ್ಷರನ್ನಾಗಿ ನಿತೀಶ್ ಹೆಚ್ ಕೋಟ್ಯಾನ್, ಕಾರ್ಯಾಧ್ಯಕ್ಷರಾಗಿ ಶೇಖರ್ ಕುಕ್ಕೆಡಿ, ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಭರತರಾಜ್ ಜೈನ್ ಪಾಪುದಡ್ಕಗುತ್ತು,ಕೋಶಾಧಿಕಾರಿ ಅಶೋಕ್ ಪಾಣೂರು ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version