Home ರಾಜಕೀಯ ಸಮಾಚಾರ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ ಮರುಡಾಮರೀಕರಣ ಕಾಮಗಾರಿಗೆ ಸಂಸದ ಬ್ರಿಜೇಶ್ ಚೌಟರಿಂದ ಚಾಲನೆ

ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ ಮರುಡಾಮರೀಕರಣ ಕಾಮಗಾರಿಗೆ ಸಂಸದ ಬ್ರಿಜೇಶ್ ಚೌಟರಿಂದ ಚಾಲನೆ

0

ಬೆಳ್ತಂಗಡಿ : ಗುರುವಾಯನಕೆರೆ ಉಪ್ಪಿನಂಗಡಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯು ರೂ.6 ಕೋಟಿ ವೆಚ್ಚದಲ್ಲಿ ಮರು ಡಾಮರೀಕಣವಾಗಲಿದ್ದು, ಕಾಮಗಾರಿಗೆ ಫೆ.18ರಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಶಿಲಾನ್ಯಾಸ ನೆರವೇರಿಸಿದರು. ಶಾಸಕ ಹರೀಶ್ ಪೂಂಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಮನವಿ ಮೇರೆಗೆ ಸಂಸದ ಕ್ಯಾ। ಬ್ರಿಜೇಶ್ ಚೌಟ ಅವರ ಪ್ರಯತ್ನದಿಂದ ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ಹಾಗೂ ಮೂಲ ಸೌಕರ್ಯ ನಿಧಿ( CRIF) ನಿಂದ ಆರು ಕೋಟಿ ಅನುದಾನ ಮಂಜೂರಾಗಿದ್ದು ಈ ಅನುದಾನದಲ್ಲಿ ರಸ್ತೆ ಮರು ಡಾಮರೀಕರಣ ನಡೆಯಲಿದೆ.


ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ,
ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್‌, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ,ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಪ್ರಮುಖರಾದ ಈಶ್ವರ ಭೈರ, ವಸಂತಿ ಮಚ್ಚಿನ, ವಡಿವೇಲು, ಮಹಾಬಲ ಗೌಡ, ಉಮೇಶ್ ಕುಲಾಲ್, ರಕ್ಷಿತ್ ಪಣೆಕ್ಕರ್, ಮಂಜುನಾಥ ಕುಂಬ್ಳೆ,, ಕಾಂತಪ್ಪ ಗೌಡ, ಆಶಾಲತಾ, ಸುಬ್ರಹ್ಮಣ್ಯ ಕುಮಾರ್‌ ಅಗರ್ತ, ರಾಜ್ ಪ್ರಕಾಶ್ ಶೆಟ್ಟಿ, ರಾಜೇಶ್ ಕುಲಾಲ್ ಮಾಲಾಡಿ, ಸಂತೋಷ್ ಗುರುವಾಯನಕೆರೆ, ಉದಯ ಬಂದಾರು, ನವೀನ್ ನೆರಿಯ, ಪ್ರಭಾಕರ ಆಚಾರ್ಯ, ಗಣೇಶ್ ಗೌಡ ನಾವೂರು, ಶರತ್ ಕುಮಾ‌ರ್ ಶೆಟ್ಟಿ, ದಿವಾಕರ್ ಗೇರುಕಟ್ಟೆ, ಅರುಣ್ ಗುರುವಾಯನಕೆರೆ, ಜಗದೀಶ್ ಕನ್ನಾಜೆ, ಸೀತಾರಾಮ ಬೆಳಾಲ್, ವಿಠಲ ಮೂಲ್ಯ, ಸುಂದರ ಹೆಗ್ಡೆ ವೇಣೂರು, ಮೋಹನ್ ಅಂಡಿಂಜೆ, ಚಂದ್ರಕಾಂತ್ ನಿಡ್ಡಾಜೆ,ರಕ್ಷಿತ್ ಪಣೆಕ್ಕರ,ಗಣೇಶ್ ಗೌಡ ನಾವೂರು,ಜನಾರ್ಧನ ಗೌಡ ಗೇರುಕಟ್ಟೆ, ಈಶ್ವರ ಬೈರ, ನವೀನ್ ನೆರಿಯ, ಗೀರೀಶ್ ಡೋಂಗ್ರೆ, ಜಯಾನಂದ ಕಲ್ಲಾಪು, ಭಾರತಿ ಎಸ್ ಹಾಗೂ ಇತರರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version