Home ಅಪಘಾತ ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು ನೂರಾರು ಎಕ್ರೆ ಅರಣ್ಯ ಬೆಂಕಿಗೆ ಆಹುತಿ

ಚಾರ್ಮಾಡಿ ಘಾಟಿಯಲ್ಲಿ ಕಾಡ್ಗಿಚ್ಚು ನೂರಾರು ಎಕ್ರೆ ಅರಣ್ಯ ಬೆಂಕಿಗೆ ಆಹುತಿ

23
0

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಸಮೀಪ ಸೇರಿದಂತೆ ವಿವಿಧೆಡೆ ಶುಕ್ರವಾರ ರಾತ್ರಿ ಆವರಿಸಿದ ಕಾಡ್ಗಿಚ್ಚು ಶನಿವಾರವೂ ಸಹ ಉರಿಯುತ್ತಿದ್ದು, ಅಗ್ನಿಶಾಮಕ‌ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಿಸಿಲಿನಲ್ಲಿಯೇ ಹರಸಾಹಸ ಮಾಡಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದರು. ಸತತ ಪ್ರಯತ್ನದಿಂದ ಬೆಂಕಿ ಹತೋಟಿಗೆ ಬಂದಿದ್ದು ಇನ್ನು ಕಾರ್ಯಾಚರಣೆ ಮುಂದುವರಿದಿದೆ.

ಸಿಬ್ಬಂದಿಗಳು ಕಡಿದಾದ ಬೆಟ್ಟವನ್ನೇರಿ ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಚಾರ್ಮಾಡಿ ಅರಣ್ಯದಲ್ಲಿ ಎರಡನೇ ಸಲ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ.

LEAVE A REPLY

Please enter your comment!
Please enter your name here