
ಬೆಳ್ತಂಗಡಿ: ಮಂಗಳೂರಿನ ಸಂಸ್ಕಾರ ಭಾರತಿ ವತಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರ ಸಾಧಕರಿಗೆ ಮನೆ- ಮನದ ಸನ್ಮಾನ ಕಾರ್ಯಕ್ರಮಕ್ಕೆ ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಸಂಸ್ಕಾರ ಭಾರತಿಯ ತಾಲೂಕು ಅಧ್ಯಕ್ಷ ಸಂಪತಾ ಸುವರ್ಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು,ತಾಲೂಕಿನ 81 ಗ್ರಾಮಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಸಾಧಕರ ಮನೆಗಳಿಗೆ ತೆರಳಿ ಸಂಸ್ಕಾರ ಭಾರತಿಯ ಸದಸ್ಯರು, ಗ್ರಾಮಸ್ಥರು ಹಾಗೂ ಗಣ್ಯರು ತೆರಳಿ ಸನ್ಮಾನಿಸಿದರು.
ಸಹಕಾರಿ ಕ್ಷೇತ್ರದ ಶ್ರೀಧರ ಜಿ.ಭಿಡೆ, ಸಾಮಾಜಿಕ ಕ್ಷೇತ್ರದ ಅನಂತ ಭಟ್ ಮಚ್ಚಿಮಲೆ, ಅಡೂರು ವೆಂಕಟ್ರಾಯ, ರಾಜಕೀಯ ಕ್ಷೇತ್ರದ ಕೊರಗಪ್ಪ ನಾಯ್ಕ, ಸಮಾಜ ಸೇವೆಯಲ್ಲಿ ಅಗರಿ ರಾಮಣ್ಣ ಶೆಟ್ಟಿ, ಧಾರ್ಮಿಕ ಕ್ಷೇತ್ರದಲ್ಲಿ ವೆಂಕಟೇಶ್ವರ ಭಟ್, ನಾಟಿವೈದ್ಯರಾದ ಸೇಸಮ್ಮ, ಶೈಕ್ಷಣಿಕ ಕ್ಷೇತ್ರದಲ್ಲಿ ಬಾಬು ಗೌಡ, ವಿಜಯಮ್ಮ, ಸಣ್ಣ ವ್ಯಾಪಾರಿ ನೇಮು ಶೆಟ್ಟಿ, ಯಕ್ಷಗಾನ ಕ್ಷೇತ್ರದಲ್ಲಿ ಚಂದ್ರಮೋಹನ್ ಮರಾಠೆ, ಜಾನಪದ ಕ್ಷೇತ್ರದ ಅಪ್ಪಿ ನಾಯ್ಕ, ದೈವಾರಾಧನೆಯಲ್ಲಿ ಗಣೇಶ ಬಂಗೇರ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೀರ್ತನಾ ಕಲಾತಂಡದ ಸದಾನಂದ ಬಿ., ಕ್ರೀಡಾ ಸಂಘಟನೆಯಲ್ಲಿ ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ ನಾಮದೇವ ರಾವ್ ,ಕಲಾ ಕ್ಷೇತ್ರದಲ್ಲಿ ಜಯರಾಮ ಕೆ. ಮತ್ತು ನಾರಾಯಣ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಸಾವಿರ ಸಾಧಕರು ಕಾರ್ಯಕ್ರಮವನ್ನು ಮುಂಡಾಜೆಯಲ್ಲಿ ಆರಂಭಿಸಿದಾಗ ಈ ರೀತಿಯ ಪ್ರತಿಕ್ರಿಯೆ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಪ್ರತಿ ಸಾಧಕರ ಮನೆಗೆ ಭೇಟಿ ನೀಡಿದಾಗ ಅವರ ಆತಿಥ್ಯ ಅವರ ಸಜ್ಜನಿಕೆ ಮನ ಮುಟ್ಟಿದೆ, ಇದು ನಿಜವಾದ ಅರ್ಥದಲ್ಲಿ ಸಂಸ್ಕಾರ ಭರಿತ ಮನೆ ಮನ ಮುಟ್ಟಿದ ಭಾವಾಭಿಯಾನ
ಸಂಪತ್ ಬಿ ಸುವರ್ಣ

ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ತಾರಾನಾಥ ಕೊಠಾರಿ, ತಾಲೂಕು ಅಧ್ಯಕ್ಷ ಸಂಪತ್ ಸುವರ್ಣ, ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಆರ್ ಎಸ್ ಎಸ್ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ, ಮುಂಡಾಜೆ ವಿವೇಕಾನಂದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ನಾರಾಯಣಗೌಡ,
ಧರ್ಮ ಜಾಗರಣ ತಾಲೂಕು ಸಂಯೋಜಕ ತೀಕ್ಷಿತ್ ಕಲ್ಬೆಟ್ಟು, ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕುಮಾರ್ ನಾಥ್, ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಗೋಖಲೆ, ಜಿಲ್ಲಾ ಸಾಮರಸ್ಯ ಪ್ರಮುಖ್ ಶಿವಪ್ರಸಾದ್ ಮಲೆಬೆಟ್ಟು, ಶಶಿಧರ ಕಲ್ಮಂಜ, ಪ್ರಕಾಶ್ ನಾರಾಯಣ್ ರಾವ್ ಮತ್ತಿತರರು ಭಾಗವಹಿಸಿ ಸಹಕರಿಸಿದರು.

