ಬೆಳ್ತಂಗಡಿ: ಕಾಂಗ್ರೇಸ್ ಪಕ್ಷದ ದ.ಕ.ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುಳ್ಳುಸುದ್ದಿಯನ್ನು ಕಿಡಿಗೇಡಿಗಳು ಸಾಮಾಜಿಕಜಾಲತಾಣದಲ್ಲಿ ಹಾಕಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಇದು ವಿಪಕ್ಷದವರ ಪಿತೂರಿಯಾಗಿದೆ ಎಂದು ಕೆ.ಪಿ.ಸಿ.ಸಿ. ಸದಸ್ಯ ಕೇಶವ ಪಿ. ಬೆಳಾಲು ಹೇಳಿದ್ದಾರಲ್ಲದೆ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾಭವನದಲ್ಲಿ ಬುಧವಾರ ಅವರು ಪತ್ರಿಕಾಗೋಷ್ಠಿ ನಡೆಸಿದರು.
ಹರೀಶ್ ಕುಮಾರ್ ಅವರು ಪಕ್ಷದ ಕೆಲಸವನ್ನು ಚಾಚೂ ತಪ್ಪದೆ ನಿಷ್ಠೆಯಿಂದ ಮಾಡಿದವರಾಗಿದ್ದಾರೆ. 1978 ರಲ್ಲಿ ಇಂದಿರಾಗಾಂಧಿಯವರು ಚಿಕಮಗಳೂರಿನಿಂದ ಸ್ಪರ್ಧಿಸಿದಾಗ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಅವರು ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು. ಇದೀಗ 7 ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿದ್ದಾರೆ. ನಿವೃತ್ತಿಯನ್ನು ಇದುವರೆಗೆ ಅವರು ಘೋಷಿಸಿಕೊಂಡಿಲ್ಲ. ಇದು ಯಾರೋ ಸ್ವ ಹಿತಕ್ಕಾಗಿ ಯಾರನ್ನೋ ಬಳಸಿಕೊಂಡು ಮಾಡುತ್ತಿರುವ ಕೃತ್ಯವಾಗಿದೆ. ಸುಳ್ಳು ಸುದ್ದಿಯನ್ನು ಹರಡಿಸಿರುವುದು ನಾಚಿಗೇಡಿನ ಸಂಗತಿಯಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಅಬ್ದುಲ್ ರಹಿಮಾನ್ ಪಡ್ಪು, ಪ್ರಭಾಕರ ಶಾಂತಿಕೋಡಿ, ಜಗದೀಶ್.ಡಿ, ಮೋಹನ್ ಶೆಟ್ಟಿಗಾರ್ ಮತ್ತಿತರರು ಇದ್ದರು.