Home ರಾಜಕೀಯ ಸಮಾಚಾರ ಬಾಂಜಾರು ಮಲೆ ಮಲೆಕುಡಿಯರ ಜಮೀನು ಸಮಸ್ಯೆ ; ವಿಧಾನ ಪರಿಷತ್ ನಲ್ಲಿ ಸರಕಾರದ ಗಮನ ಸೆಳೆದ...

ಬಾಂಜಾರು ಮಲೆ ಮಲೆಕುಡಿಯರ ಜಮೀನು ಸಮಸ್ಯೆ ; ವಿಧಾನ ಪರಿಷತ್ ನಲ್ಲಿ ಸರಕಾರದ ಗಮನ ಸೆಳೆದ ಬಿ‌.ಕೆ‌ ಹರಿ ಪ್ರಸಾದ್

0

ಬೆಳ್ತಂಗಡಿ; ತಾಲೂಕಿನ ಬಾಂಜಾರು ಮಲೆಯಲ್ಲಿ ವಾಸಿಸುತ್ತಿರುವ 47ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಭೂ ಮಸೂದೆ ಕಾಯ್ದೆಯ ಅಡಿಯಲ್ಲಿ ಮಂಜೂರಾಗಿರುವ ಜಮೀನಿನ ವಿರುದ್ದ ರಾಜ್ಯ ಸರಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆಯುವಂತೆ ಹಿರಿಯ ಕಾಂಗ್ರೆಸ್ ಮುಖಂಡ  ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವಿಧಾನ ಪರಿಷತ್ ನಲ್ಲಿ ಸರಜಾರದ ಗಮನ ಸೆಳೆದು ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಬಿ.ಕೆ ಹರಿಪ್ರಸಾದ್ ಅವರು ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಯಲ್ಲಿ ವಾಸಿಸುತ್ತಿರುವ ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಭೂ ಮಸೂದೆ ಕಾಯ್ದೆಯ ಅಡಿಯಲ್ಲಿ ಜಮೀನು ಮಂಜೂರಾಗಿದೆ. ಆದರೆ ಬಳಿಕ ಸರಕಾರ ಯೇನಪೋಯ ಕಂಪೆನಿಯವರು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಂತೆ ಹೆಚ್ಚುವರಿ ಜಮೀನನ್ನು ಸರಕಾರಕ್ಕೆ ಹಿಂತಿರುಗಿಸ ಬೇಕಾಗಿದ್ದುದರಿಂದ ಅವರು ಗೇಣಿದಾರರಲ್ಲದ 53 ಜನರಿಗೆ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಂಜೂರಾಗಿತುವ ಜಮೀನನ್ನು ರದ್ದು ಪಡಿಸಲು ಸರಕಾರ ಮುಂದಾಗಿದೆ. ಇದರಲ್ಲಿ 47ಕುಟುಂಬಗಳು ಆದಿವಾಸಿ ಸಮುದಾಯದ ಕುಟುಂಬಗಳಾಗಿದ್ದು ಇವರು ತಲತಲಾಂತರದಿಂದ ಇಲ್ಲಿ ವಾಸಿಸಿ ಕೃಷಿ ಮಾಡಿಕೊಂಡು ಬಂದವರಾಗಿದ್ದಾರೆ.
ಇದೀಗ ಸರಕಾರ ಮಂಜೂರಾಗಿರುವ ಜಮೀನನ್ನು ಹಿಂಪಡೆಯಲು ಮುಂದಾಗಿದ್ದು ಪ್ರಕರಣ ಸುಪ್ರೀಂ ಕೋರ್ಟನಲ್ಲಿದೆ. ಬಡ ಆದಿವಾಸಿ ಕುಟುಂಬಗಳು ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದು ಅವರಿಗೆ ಕಷ್ಟ ಸಾಧ್ಯವಾದ ವುಚಾರವಾಗಿದ್ದು ಇವರ ವಿರುದ್ದ ಸರಜಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಆದಿವಾಸಿ ಸಮುದಾಯದ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಸಭೆಯಲ್ಲಿ ಸರಕಾರದ ಗಮನ ಸೆಳೆದರು.

NO COMMENTS

LEAVE A REPLY

Please enter your comment!
Please enter your name here

Exit mobile version