ಬೆಳ್ತಂಗಡಿ : ಮೂಡುಕೋಡಿಯ ಶಿವಕೃಪಾ ಎಂಬಲ್ಲಿ ನವೀನ್ ಎಂಬಾತನು ತನ್ನ ಪತ್ನಿ ಭಾಗ್ಯ ರವರಿಗೆ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಡಿ.16 ರಂದು ಪ್ರಕರಣ ದಾಖಲಾಗಿದೆ.
ಸುಮಾರು 16 ವರ್ಷಗಳ ಹಿಂದೆ ಭಾಗ್ಯ ನವೀನ್ ರವನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇರುತ್ತಾರೆ, ನವೀನ್ ಮದುವೆಯಾಗಿ ಸುಮಾರು 5 ವರ್ಷ ಅನ್ನೋನ್ಯವಾಗಿದ್ದು ನಂತರ ವಿಪರೀತ ಮದ್ಯ ಸೇವಿಸುವ ಚಟಹೊಂದಿ ವಿನಾ: ಕಾರಣ ಆಗಾಗ ಕ್ಷುಲ್ಲಕ ವಿಚಾರದಲ್ಲಿ ಮಾತಿನ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಡಿ.15 ರಂದು ರಾತ್ರಿ ಈತ ಭಾಗ್ಯ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿದೆ ಎಂದು ಭಾಗ್ಯ ರವರು ದೂರು ನೀಡಿದ್ದಾರೆ.
ಅದರಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.