Home ರಾಜಕೀಯ ಸಮಾಚಾರ ಮಚ್ಚಿನ ಸಿ.ಎ ಬ್ಯಾಂಕ್ ಚುನಾವಣೆ; ಸತತ ನಾಲ್ಕನೇ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತರು

ಮಚ್ಚಿನ ಸಿ.ಎ ಬ್ಯಾಂಕ್ ಚುನಾವಣೆ; ಸತತ ನಾಲ್ಕನೇ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತರು

0

ಮಚ್ಚಿನ ಸಿ.ಎ. ಬ್ಯಾಂಕ್ ನ ಆಡಳಿತ ಮಂಡಳಿಯ ಮುಂದಿನ 5ವರ್ಷದ ಅವಧಿಗೆ ಡಿ.15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲ 12 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಸತತ ನಾಲ್ಕನೇ ಬಾರಿ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಸಾಮಾನ್ಯ ಕ್ಷೇತ್ರದಿಂದ ಉಮೇಶ, ಚಿತ್ತರಂಜನ್, ಜಯರಾಮ, ಪದ್ಮನಾಭ ಸಾಲಿಯಾನ್ ವಡ್ಡ, ಮೋಹನ್ ಗೌಡ, ಕೆ. ಶ್ರೀಧ‌ರ್ ಪೂಜಾರಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ತುಂಗಪ್ಪ ಯಾನೆ ಶ್ರೀಧರ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಗಣೇಶ್ ಅರ್ಕಜೆ, ಮಹಿಳಾ ಕ್ಷೇತ್ರದಿಂದ ಬೇಬಿ, ಸುಜಾತ ಪಿ. ಸಾಲ್ಯಾನ್, ಪ. ಪಂಗಡ ಕ್ಷೇತ್ರದಿಂದ ರಾಜೇಶ್ ನಾಯ್ಕ, ಪ. ಜಾತಿ ಕ್ಷೇತ್ರದಿಂದ ಆನಂದ ಗೆಲುವನ್ನು ಪಡೆದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version