ಬೆಳ್ತಂಗಡಿ: ತಾಲೂಕಿನಲ್ಲಿ ಶನಿವಾರ ನಡೆದ ಪಂಚಾಯಿತಿ ಉಪಚುನಾವಣೆಗೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಟ್ಟು ಮೂರು ಕಡೆ ಮತದಾನ ನಡೆದಿದ್ದು ಉಜಿರೆ 8ನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ 2036 ಮತದಾರರ ಪೈಕಿ 953 ಮತದಾರರು ಮತ ಚಲಾಯಿಸಿದ್ದು 46.83ಶೇ. ಮತದಾನ ದಾಖಲಾಗಿದೆ.
ಕುವೆಟ್ಟಿನಲ್ಲಿ ಒಂದನೇ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ 1,410 ಮತದಾರರ ಪೈಕಿ 257 ಮಂದಿ ಮತ ಚಲಾಯಿಸಿದ್ದು 18.23ಶೇ. ಮತದಾನವಾಗಿದೆ.
ಇಳಂತಿಲದ ಒಂದನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ1,257 ಮತದಾರರ ಪೈಕಿ 782 ಮಂದಿ ಮತ ಚಲಾಯಿಸಿದ್ದು 62.21ಶೇ. ಮತದಾನ ದಾಖಲಾಗಿದೆ.