
ಬೆಳ್ತಂಗಡಿ: ತಾಲೂಕಿನಲ್ಲಿ ಅತ್ಯಂತ ಕುತೂಹಲ ಕೆರಳಿಸಿದ್ದ ತಾಲೂಕು ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಜಯರಾಜ್ ಜೈನ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನ.16ರಂದು ಬೆಳ್ತಂಗಡಿ ಏಕತಾ ಸೌಧದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ ಒಟ್ಟು 7 ಮಂದಿ ಅಂತಿಮ ಅಭ್ಯರ್ಥಿಗಳು ಕಣದಲ್ಲಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸರಕಾರಿ ಪ್ರಾಥಮಿಕ ಶಾಲೆಗಳ ವಿಭಾಗದಿಂದ ಜಯರಾಜ ಜೈನ್ ಹಾಗೂ ಗ್ರಾಮೀಣಾಭಿವೃದ್ಧಿ ಪಟ್ಟಣ ಪಂಚಾಯತ್ ರಾಜ್ ಇಲಾಖೆಯ ಪ್ರಶಾಂತ್ ಡಿ. ಬಳಂಜ ನಾಮಪತ್ರ ಸಲ್ಲಿಸಿದ್ದರು.
ವಿವಿಧ ಇಲಾಖೆಗಳಿಂದ ಆಯ್ಕೆಯಾಗಿದ್ದ 22 ಮಂದಿ ನಿರ್ದೇಶಕರುಗಳು ಮತದಾನದ ಹಕ್ಕನ್ನು ಪಡೆದಿದ್ದರು.
ಚುನಾವಣೆಯಲ್ಲಿ ಜಯರಾಜ ಜೈನ್ ಅವರು 22ಮತಗಳಲ್ಲಿ 15 ಮತಗಳನ್ನು ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಶಾಂತ್ ಅವರಿಗೆ ಕೇವಲ 7ಮತಗಳು ಮಾತ್ರ ಲಭಿಸಿದೆ.

2021ರಿಂದ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ಹಿಸುತ್ತಿದ್ದ ಜಯರಾಜ್ ಜೈನ್ ಅವರು ಇದೀಗ ಚುನಾವಣೆಯಲ್ಲಿ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಸರಕಾರಿ ಉನ್ನತೀಕರಿಸಿದ ಪ್ರಾಧಮಿಕ ಶಾಲೆ ಮಾಲಾಡಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಇವರು ತಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಜಿಲ್ಲೆ ರಾಜ್ಯ , ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದ್ದಾರೆ, ಶಾಲೆಯೊಂದಿಗೆ ಸಮಾಜಿಕ ಚಟುವಟಿ ಕೆಗಳಲ್ಲಿಯೂ ಸಕ್ರಿಯರಾಗಿದ್ದು ವಿವಿಧ ಸಂಘ ಸಂಸ್ಥೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ, 2010ರಲ್ಲಿಯೇ ಇಲಾಖೆಯ ವತಿಯಿಂದ ಜಿಲ್ಲಾ ಅತ್ಯುಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಪಡೆದಿರುವ ಇವರು ರಾಷ್ಟ್ರೀಯ ಮಟ್ಟದ ಕಬಡ್ಡಿ ತೀರ್ಪುಗಾರರಾಗಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್ 2 ಇದರ ರಾಜ್ಯ ಸಂಘದ ಜತೆ ಕಾರ್ಯದರ್ಶಿಯಾಗಿದ್ದಾರೆ, ಸಂಘ ಅಂಸ್ಥೆಗಳಿಂದ
ಹಲವಾರು ಪ್ರಶಸ್ತಿಗಳು, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.
ಖಜಾಂಜಿ ಸ್ಥಾನಕ್ಕೆ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯ ಶೆಟ್ಟಿ ನಾರಾಯಣ ಸಂಜೀವ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವೆಯ ಸದಾಶಿವ ಭಟ್ ಕೆ. ಅಂತಿಮ ಕಣದಲ್ಲಿದ್ದರು. ಚುನಾವಣೆಯಲ್ಲಿ ನಾರಾಯಣ ಅವರಿಗೆ 17ಮತಗಳು ಹಾಗೂ ಸದಾಶಿವ ಭಟ್ ಅವರಿಗೆ 5ಮತಗಳು ಲಭಿಸಿದ್ದು ಶೆಟ್ಟಿ ನಾರಾಯಣ ಸಂಜೀವ ಅವರು
ಖಜಾಂಚಿಯಾಗಿ ಆಯ್ಕೆಯಾದರು.

ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸರಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಆನಂದ ಡಿ., ಕಂದಾಯ ಇಲಾಖೆಯ ಪ್ರದೀಪ್ ಕುಮಾರ್ ಸಿ. ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೋಮನಾಥ ಆರ್. ಅವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣೆಯಲ್ಲಿ ಕಂದಾಯ ಇಲಾಖೆಯ ಪ್ರದೀಪ್ ಕುಮಾರ್ ಸಿ. ಅವರಿಗೆ 8 ಮತಗಳು ಹಾಗೂ ಇತರ ಇಬ್ಬರು ಅಭ್ಯರ್ಥಿಗಳಿಗೆ ತಲಾ ಏಳು ಮತಗಳು ಮಾತ್ರ ಲಭಿಸಿದ್ದು ಒಂದು ಮತದ ಅಂತರದಿಂದ ಪ್ರದೀಪ್ ಕುಮಾರ್ ಅವರು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಬೈಲಾ ನಿಯಮದಂತೆ ಅಧ್ಯಕ್ಷರು ನೇಮಕಮಾಡಲಿದ್ದಾರೆ.