Home ಸ್ಥಳೀಯ ಸಮಾಚಾರ ಭಜನೆ ಬಗ್ಗೆ ಅವಹೇಳನಕಾರಿ ಹೇಳಿಕೆ; ಭಜನಾ ಪರಿಷತ್ ನೇತೃತ್ವದಲ್ಲಿ ಭಜಕರ ಸಮಾವೇಶ, ಕ್ರಮಕ್ಕೆ ಒತ್ತಾಯ

ಭಜನೆ ಬಗ್ಗೆ ಅವಹೇಳನಕಾರಿ ಹೇಳಿಕೆ; ಭಜನಾ ಪರಿಷತ್ ನೇತೃತ್ವದಲ್ಲಿ ಭಜಕರ ಸಮಾವೇಶ, ಕ್ರಮಕ್ಕೆ ಒತ್ತಾಯ

0
21

ಬೆಳ್ತಂಗಡಿ : ಭಜನಾ ಪರಿಷತ್‌ ಬೆಳ್ತಂಗಡಿ,ಕುಣಿತ ಭಜನಾ ತರಬೇತಿದಾರರ ಸಂಘ, ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಕುಣಿತ ಭಜನೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನ ಬಳಿಯಿಂದ ಖಂಡನಾ ಮೆರವಣಿಗೆ ಮತ್ತು ಬೆಳ್ತಂಗಡಿ ಆಡಳಿತ ಸೌಧದ ಆವರಣದಲ್ಲಿ ಭಜಕರ ಸಮಾವೇಶವು ನ.4 ರಂದು ನಡೆಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸುಬ್ರಹ್ಮಣ್ಯ ಅಗರ್ತ, ಧನಂಜಯ ರಾವ್ ಬಿ.ಕೆ, ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಗಿರಿಜ ಭಟ್ ಮಾತನಾಡಿ, ಭಜಕರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.


ವೇದಿಕೆಯಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ್ ಪಿ ಸಾಲ್ಯಾನ್, ಭಜನಾ ಪರಿಷತ್ ಅಧ್ಯಕ್ಷ ವೆಂಕಟೇಶ್‌ ಭಟ್, ವಿ.ಹಿಂ. ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ನ.ಪಂ ಅಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಭಾಸ್ಕರ್ ಧರ್ಮಸ್ಥಳ, ಸೀತಾರಾಮ ಬೆಳಾಲ್, ಕೊರಗಪ್ಪ ನಾಯ್ಕ ಜಯಂತ್ ಗೌಡ, ಮಂಜುನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಭಜನಾ ಪರಿಷತ್‌ ಉಪಾಧ್ಯಕ್ಷ ಜಯಪ್ರಕಾಶ್ ಕಡಮ್ಮಾಜೆ ಸ್ವಾಗತಿಸಿದರು. ಭಜನಾ ತರಬೇತಿ ಶಿಕ್ಷಕ ಹರೀಶ್ ನೆರಿಯ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶಕ್ಕೆ ಮೊದಲು ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿಯಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ನೂರಾರು ಭಜಕರು ಸಮಾವೇಶದಲ್ಲಿ ಪಾಲ್ಗೊಂಡರು.

NO COMMENTS

LEAVE A REPLY

Please enter your comment!
Please enter your name here