Home ಸ್ಥಳೀಯ ಸಮಾಚಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿ.ಕೆ ವಿಟ್ಲ ಹಾಗೂ ನಿವೃತ್ತ ಸೈನಿಕ ಮಂಜುನಾಥ ಅವರಿಗೆ ಅ.2ರಂದು...

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವಿ.ಕೆ ವಿಟ್ಲ ಹಾಗೂ ನಿವೃತ್ತ ಸೈನಿಕ ಮಂಜುನಾಥ ಅವರಿಗೆ ಅ.2ರಂದು ಅಭಿನಂದನಾ ಸಮಾರಂಭ

0
32

ಬೆಳ್ತಂಗಡಿ : ಭಾರತೀಯ ಭೂಸೇನೆಯಲ್ಲಿ
ಸುದೀರ್ಘ 24 ವರ್ಷ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ ತಾಯ್ತಾಡಿಗೆ ಆಗಮಿಸುತ್ತಿರುವ ಹೆಮ್ಮೆಯ ಯೋಧ ಮಂಜುನಾಥರವರಿಗೆ ಹಾಗೂ ನಮ್ಮೂರ ಪ್ರೌಢಶಾಲೆ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ, “ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ಪಡೆದ ವಿಶ್ವನಾಥ ಗೌಡ (ವಿ.ಕೆ. ವಿಟ್ಲ) ರವರಿಗೆ ನಾಗರಿಕ ಅಭಿನಂದನಾ ಸಮಿತಿಯಿಂದ ಕುವೆಟ್ಟು ಹಾಗೂ ಓಡಿಲ್ನಾಳ ಗ್ರಾಮದ 35 ಸಂಘ ಸಂಸ್ಥೆಗಳು ಒಟ್ಟು ಸೇರಿ ಅ.2 ರಂದು ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರು, ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ ರವರು ಹೇಳಿದರು.

ಅವರು ಸೆ.24 ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನೂ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ವಹಿಸಲಿದ್ದು, ಅಂಕಣಕಾರರಾದ ಆದರ್ಶ್ ಗೋಖಲೆ ಅಭಿನಂದನಾ ಭಾಷಣವನ್ನು ಮಾಡಲಿದ್ದಾರೆ ಬೆಳಿಗ್ಗೆ 9ಗಂಟೆಗೆ ಸರಿಯಾಗಿ ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದಿಂದ ಮದ್ದಡ್ಕ ಕಿನ್ನಿಗೋಳಿಯ ವರೆಗೆ ಯೋಧರರಾದ ಮಂಜುನಾಥ್ ರವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಿದೆ. ವಿ.ಕೆ. ವಿಟ್ಲ ರವರನ್ನು ಗುರುವಾಯನಕೆರೆಯಲ್ಲಿ ಸ್ವಾಗತಿಸಿಲಿದೆ. 10ಗಂಟೆಗೆ ಮದ್ದಡ್ಕ- ಕಿನ್ನಿಗೋಳಿಯಿಂದ ಭವ್ಯ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಮೂಲಕ ಸೈನಿಕ-ಶಿಕ್ಷಕರನ್ನು ಸಭಾಂಗಣಕ್ಕೆ ಕರೆತಂದು ನಂತರ ವೈಯಕ್ತಿಕ ಹಾಗೂ ಸಂಘ-ಸಂಸ್ಥೆಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರು, ನಾಗರಿಕ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ.ಪ್ರಭಾಕರ ಬಂಗೇರ, ನಿವೃತ್ತ ಯೋಧರು, ಗೌರವ ಸಲಹೆ ಗಾರರಾದ ಟಿ. ರಾಮ್ ಭಟ್, ಅಶ್ರಫ್ ಚಿಲಿಂಬಿ ಉಪಸ್ಥಿತರಿದ್ದರು.
ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ ಸ್ವಾಗತಿಸಿ ಧನ್ಯವಾದವಿತ್ತರು.

NO COMMENTS

LEAVE A REPLY

Please enter your comment!
Please enter your name here