ಬೆಳ್ತಂಗಡಿ; ಮಹಿಳೆಯರ ಮೇಲೆನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಯಿಂದ ರಾಜ್ಯದಾದ್ಯಂತ ನಡೆಯುವ ಪ್ರತಿಭಟನೆಯ ಅಂಗವಾಗಿಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ( Aipwa) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಸಭೆ ನಡೆಸಲಾಯಿತು.
ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಬಳಿ ಯಿಂದ ಮೆರವಣಿಗೆ ಹೊರಟು ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನಾ ಸಭೆನಡೆಯಿತು . ಸಭೆಯನ್ನು ಉದ್ಧೇಶಿಸಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ಸಮಿತಿ ಸದಸ್ಯ ರಾದ ಮೋಹನ್ ಕೆ.ಇ, ಮಾತನಾಡಿದರು ಸಂಘಟನೆಯ ಮುಖಂಡರಾದ ಸುಧಾ ಸ್ವಾಗತಿಸಿದರು ಪ್ರೇಮ ವಂದಿಸಿದರು ವಿವಿಧ ಸಂಘಟನೆಗಳ ಮುಖಂಡರಾದ ಕುಸುಮಾವತಿ, ಸಜೇಶ್ ವಿಟ್ಲ, ಸಂಜೀವ ನಾಯ್ಕ್, ರಾಮಚಂದ್ರ , ಮಹಾವೀರ್ ಜೈನ್ ಪುತ್ತೂರು ,ಲಿಯಕತ್ ಖಾನ್ ಮುಂತಾದವರು ನೇತೃತ್ವ ವಹಿಸಿದ್ದರು.