
ಬೆಳ್ತಂಗಡಿ; ಧರ್ಮಸ್ಥಳ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಸೆ.8 ಭಾನುವಾರ ಕನ್ಯಾಮರಿಯಮ್ಮನವವರ ಜನ್ಮದಿನಾ ಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಧರ್ಮಗುರುಗಳಾದ ಳಾದ ಫಾ. ರೋಕಿ ಮೇನಾಚೇರಿ ಹಾಗೂ ಸಹಾಯಕ ಧರ್ಮಗುರುಗಳಾದ ಫಾ.ಕ್ರಿಸ್ಟಿನ್ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು,
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾ. ರೋಕಿ ಮೇನಾಚೇರಿ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಸ್ಥಳ ಚರ್ಚನ ಏಳು ಮಂದಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ಅದೇರೀತಿ ಧರ್ಮಸ್ಥಳ ಚರ್ಚ್ ನಲ್ಲಿ ಸಂಡೆ ಸ್ಕೂಲ್ ಶಿಕ್ಷಕರಾಗಿ ಈ ಹಿಂದೆ ಸೇವೆ ಸಲ್ಲಿಸಿದವರನ್ನು ಹಾಗೂ ಈಗಿನ ಶಿಕ್ಷಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಹಾಯಕ ಧರ್ಮಗುರುಗಳಾದ ಫಾ. ಕ್ರಿಸ್ಟೀನ್, ಸಿ ಡಾ. ರೆಶ್ಮಿ ಮರಿಯಾ ಚರ್ಚ್ ಪಾಲನಾ ಮಂಡಳಿಯ ಸದಸ್ಯ ಮೌರೋಸ್ ಪಂದಮಾಕ್ಕಲ್, ಪಿ.ಟಿ.ಎ ಅಧ್ಯಕ್ಷ ಶಿಬಿ ಧರ್ಮಸ್ಥಳ, ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯ ರಾದ ರಾಜೇಶ್ ಪುನ್ನವಿಳ ಉಪಸ್ಥಿತರಿದ್ದರು, ಮೇರಿ ಸ್ಮಿತಾ, ಜೋಮಿ ಮೇಟಯಿಲ್, ಹಾಗೂ ಜೋಸ್ ಮಳಿಯೆಕ್ಕಲ್ ಕಾರ್ಯಕ್ರಮ ನಿರೂಪಿಸಿದರು. ಸಿನಿ ಕ್ಸೇವಿಯರ್ ಸ್ವಾಗತಿಸಿದರು, ಶ್ರೇಯ ಪೈಕಾಟ್ ವಂದಿಸಿದರು.


ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
