ಬೆಳ್ತಂಗಡಿ; ಮುಂಡ್ರುಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಿತು.
ಪಂದ್ಯಾಟದಲ್ಲಿ ನಿಡ್ಲೆ, ಕೊಕ್ಕಡ, ಮತ್ತು ಪೆರ್ಲ ಕ್ಲಸ್ಟರ್ ಗಳ ತಂಡಗಳ ತಂಡಗಳು ಭಾಗವಹಿಸಿದ್ದವು.
ವಾಲಿಬಾಲ್ ಪಂದ್ಯಾಟವನ್ನು ಯಶಸ್ವಿಯಾಗಿ ನಡೆಸಲು ಹಳೆ ವಿದ್ಯಾರ್ಥಿ ಸಂಘ, ಗೆಳೆಯರ ಬಳಗ ಮುಂಡ್ರುಪ್ಪಾಡಿ, ಹಾಗೂ ಊರಿನ ಹಿರಿಯ ಗಣ್ಯರು, ಹಳೆ ವಿದ್ಯಾರ್ಥಿಗಳು ಎಸ್.ಡಿ.ಎಂ ಸಿ ಸದಸ್ಯರು, ಪಾಲಕ ಪೋಷಕರು, ಊರಿನ ಪರವೂರಿನ ದಾನಿಗಳು, ಗ್ರಾಮಪಂಚಾಯತು ಸದಸ್ಯರುಗಳು ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.
ವಾಲಿಬಾಲ್ ಪಂದ್ಯಾಟದಲ್ಲಿ ಕೆಮ್ಮಟೆ ತಂಡ ಪ್ರಥಮ ಸ್ಥಾನವನ್ನು ಹಾಗೂ ಎಸ್.ಡಿ.ಎಂ ಕನ್ನಡ ಮಾದ್ಯಮಶಾಲೆ ಧರ್ಮಸ್ಥಳ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.