Home ಸ್ಥಳೀಯ ಸಮಾಚಾರ ಬೆಳ್ತಂಗಡಿ ತಾಲೂಕು ಖಾಝಿ ಸ್ವೀಕಾರ ಸಮಾರಂಭ ಹಾಗೂ ಕೂರತ್ ತಂಙಳ್ ಅನುಸ್ಮರಣೆ

ಬೆಳ್ತಂಗಡಿ ತಾಲೂಕು ಖಾಝಿ ಸ್ವೀಕಾರ ಸಮಾರಂಭ ಹಾಗೂ ಕೂರತ್ ತಂಙಳ್ ಅನುಸ್ಮರಣೆ

216
0


ಬೆಳ್ತಂಗಡಿ; ಸುನ್ನೀ ಸಂಯುಕ್ತ ಜಮಾಅತ್ ವತಿಯಿಂದ ತಾಲೂಕಿನ 77 ಮೊಹಲ್ಲಾದ ಖಾಝಿ ಸ್ವೀಕಾರ ಸಮಾರಂಭ ಅ 17 ರಂದು ಗುರುವಾಯನಕೆರೆ ಎಫ್ ಎಂ ಗಾರ್ಡನ್ ನಲ್ಲಿ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಇಸ್ಮಾಯಿಲ್ ಹಾದಿ ತಂಙಳ್ ಮದನಿ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಖಾಝಿ ಯಾಗಿ ಅಧಿಕಾರ ಸ್ವೀಕರಿಸಿದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಅಬೂಬಕ್ಕರ್ ಮುಸ್ಲಿಯಾರ್ ರವರು ಮಾತನಾಡಿ ಧರ್ಮ ಸಂಬಂಧವಾದ ಆರಾಧನೆ. ನಿಖಾಹ್.ವ್ಯಾಪಾರ ಸಂಬಂಧಿಸಿದಂತೆ ಇಸ್ಲಾಮಿನ ಕರ್ಮ ಶಾಸ್ತ್ರಗಳಿಗೆ ನ್ಯಾಯ ದೊರಕಿಸಿಕೊಡಲು ನನಗೆ ಅಧಿಕಾರ ನೀಡಿದ್ದೀರಿ ಇನ್ನು ಮುಂದಕ್ಕೆ ನನ್ನ ಮಾತನ್ನು ಪಾಲಿಸುವುದು ನಿಮಗೆ ಕಡ್ಡಾಯವಾಗಿದೆ ಎಂದರು.
ಸಯ್ಯದ್ ಫಝಲ್ ಜಮಾಲುಲೈಲಿ ತಂಙಳ್ ವಾದಿ ಇರ್ಫಾನ್ ರವರು ಇತ್ತೀಚೆಗೆ ನಮ್ಮನ್ನಗಲಿದ ಖುರ್ರತ್ತುಸ್ಸಾದಾತ್ ಸೆಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಅನುಸ್ಮರಣಾ ದುಆ ನೆರವೇರಿಸಿದರು . ಸಮಿತಿಯ ಕಾರ್ಯಾಧ್ಯಕ್ಷರಾದ ಅಶ್ರಫ್ ಸಖಾಫಿ ಮೂಡಡ್ಕ ರವರು ಅನುಸ್ಮರಣಾ ಬಾಷಣ ನಡೆಸಿದರು. ಸುನ್ನೀ ಜಂಯೀಯತುಲ್ ಉಲಮಾ ಅಧ್ಯಕ್ಷರಾದ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ರವರು ಕಾರ್ಯಕ್ರಮ ಉದ್ಘಾಟಿಸಿ ದರು. ಸಮಿತಿಯ ಕೋಶಾಧಿಕಾರಿ ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನ್ನೀ ಜಂಯೀಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹುಸೈನ್ ಸ ಅದಿ ಉಸ್ತಾದ್ ಕೆ ಸಿ ರೋಡ್ ರವರು ಸಂದೇಶ ಭಾಷಣ ಮಾಡಿದರು. ರಾಜ್ಯ ವಕ್ಫ್ ಮಂಡಳಿ ಸದಸ್ಯರಾದ ಎಂ ಕೆ ಎಂ ಶಾಫಿ ಸಅದಿಯವರು ಮಾತನಾಡಿ ಅಂತಾರಾಷ್ಟ್ರೀಯ ಸುನ್ನೀ ಮುಸಲ್ಮಾನರು ಅಂಗೀಕರಿಸುವ ಏಕೈಕ ಉಲಮಾ ನಾಯರೆಂದರೆ ಅದು ಗ್ರಾಂಡ್ ಮಸ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಮಾತ್ರ ಎಂದರು. ವೇದಿಕೆಯಲ್ಲಿ ಸೈಯದ್ ಉಮ್ಮರ್ ಅಸ್ಸಖಾಫ್ ತಂಙಳ್ ಪರಪ್ಪು.ಸಯ್ಯೆದ್ ಸಾಬಿತ್ ತಂಙಳ್ ಪಾಟ್ರಕೋಡಿ. ಸಯ್ಯದ್ ಝೈನುಲ್ ಆಬಿದೀನ್ ಜಮಾಲುಲೈಲಿ ತಂಙಳ್ ಕಾಜೂರು . ಕಾವಲ್ಕಟ್ಟೆ ಹಝರತ್. ಬಾದುಶಾ ಸಖಾಫಿ ಕೇರಳ.
ಅಶ್ರಫ್ ‌ಸ ಅದಿ ಮಲ್ಲೂರು.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ.ಅಬೂಬಕ್ಕರ್ ಸಿದ್ದೀಕ್ ಮುಂಟುಗೋಳಿ. ಅಬ್ದುಲ್ ಹಕೀಂ ಅಝ್ಹರಿ ಉಸ್ತಾದ್ . ಅಬೂಸ್ವಾಲಿಹ್ ಸಖಾಫಿ ಪೂನೂರು.ಕೂರತ್ ತಂಙಳ್ ಪುತ್ರ ಸೈಯ್ಯದ್ ಅಬ್ದುರ್ರಹ್ಮಾನ್ ಮಸ್ ಊದು ತಂಙಳ್ ಮಲ್ಜಯಿ ತಂಙಳ್


ಜಿಲ್ಲಾ ವಕಫ್ ಬೋರ್ಡ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಮೊಗರ್ಪಣೆ .ಸದಸ್ಯರಾದ ಅಬೂಬಕ್ಕರ್ ಸಿದ್ದಿಖ್ ಕಾಜೂರು. ಜಂಯೀಯತುಲ್ ಉಲಮಾ ನಾಯಕರಾದ ಕಾಸಿಂ ಮುಸ್ಲಿಯಾರ್ ಕರಾಯ.ಹೈದರ್ ಮುಸ್ಲಿಯಾರ್ ಕರಾಯ.ಪಿ ಕೆ ಮುಹಮ್ಮದ್ ಮದನಿ ಕರಾಯ.ಆದಂ ಅಹ್ಸನಿ ತುರ್ಕಲಿಕೆ.ಕುಂಙಬ್ದುಲ್ಲ ದಾರಿಮಿ ಪರಪ್ಪು.ಯಾಕೂಬ್ ಮುಸ್ಲಿಯಾರ್ ಮದ್ದಡ್ಕ.ಉಮ್ಮರ್ ಸಖಾಫಿ ಕಾಜೂರು.
ಮುಫತ್ತಿಶ್ ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಬಾಹೀ ಗೇರುಕಟ್ಟೆ. ಮುಸ್ತಫಾ ನಯೀಮಿ ಹಾವೇರಿ.ಹನೀಫ್ ಸಖಾಫಿ ಬಂಗೇರ ಕಟ್ಟೆ.
ಸಮಿತಿ ಉಪಾಧ್ಯಕ್ಷ ರಾದ ಅಬ್ದುಖಾದರ್ ಹಾಜಿ ಉಜ್ರಿಬೆಟ್ಟು. ಬದ್ರುದ್ದೀನ್ ಪರಪ್ಪು.ಕಾಸಿಂ ಪದ್ಮುಂಜ.ಅಬ್ಬಾಸ್ ಬಟ್ಲಡ್ಕ.
ಸಹ ಕಾರ್ಯಧರ್ಶಿಗಳಾದ ಶರೀಫ್ ಸಖಾಫಿ ನೆಕ್ಕಿಲು. ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು. ವಝೀರ್ ಪಿಚ್ಚಲ್ಲಾರ್.ಎ ಕೆ ಅಹ್ಮದ್ ಉನ್ನಾಲು ಗೇರುಕಟ್ಟೆ.ಶರೀಫ್ ಸಖಾಫಿ ಉಜಿರ್ಬೊಟ್ಟು.ತ್ವಾಹಿರ್ ಹಿಮಮಿ ಮೊಡಂತ್ಯಾರ್.ಇಖ್ಬಾಲ್ ಮಾಚಾರು.


ಮುಹಮ್ಮದ್ ರಫೀ ಬೆಳ್ತಂಗಡಿ.ಸೆಲೀಂ ಕನ್ಯಾಡಿ.ಸೇರಿದಂತೆ ಉಲಮಾ ಉಮರಾ ನೇತಾರರು ಸಂಘ ಕುಟುಂಬದ ನಾಯಕರು ಉಪಸ್ಥಿತರಿದ್ದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಅಲ್ ಹಾಜಿ ಅಬ್ದುಲ್ ರಝಾಕ್ ಸಖಾಫಿ ಮೊಡಂತಿಯಾರ್ ರವರು ಸ್ವಾಗತಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಸುನ್ನೀ ಸಂಯುಕ್ತ ಜಮಾಅತ್ ನಡೆದುಕೊಂಡು ಬಂದ ದಾರಿ ನೆನಪಿಸಿಕೊಂಡರು.
ಅಬ್ಬಾಸ್ ಬಟ್ಲಡ್ಕ ರವರು ಧನ್ಯವಾದ ಸಲ್ಲಿಸಿದರು. ಅಶ್ರಫ್ ಸಖಾಫಿ ಯವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here