Home ಅಪರಾಧ ಲೋಕ ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ; ನೆರಿಯದಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ವಾಹನಗಳು ವಶಕ್ಕೆ

ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ; ನೆರಿಯದಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ವಾಹನಗಳು ವಶಕ್ಕೆ

810
0

ಬೆಳ್ತಂಗಡಿ : ಅಕ್ರಮವಾಗಿ ನದಿಗಳಿಂದ ಕಳ್ಳತನ ಮಾಡಿ ಮರಳು ಸಾಗಿಸುತ್ತಿದ್ದ ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್ ನೇತೃತ್ವದ ತಂಡ ಬೆಳ್ಳಂಬೆಳಗ್ಗೆ ದಾಳಿನಡೆಸಿ ಮರಳು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಿಂದ ಅಕ್ರಮವಾಗಿ ನದಿಗಳಿಂದ ಮರಳು ಕದ್ದು ತುಂಬಿಸಿಕೊಂಡು ಕಕ್ಕಿಂಜೆ ಕಡೆ ಸಾಗಾಟ ಮಾಡುತ್ತಿದ್ದ ಒಂದು ಲಾರಿ ಹಾಗೂ ಒಂದು ಟೆಂಪೋವನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ಅಕ್ರಮ ಮರಳು ಸಾಗಾಟದ ಎರಡು ಲಾರಿಗಳ ಮತ್ತು ಮರಳಿನ ಬಗ್ಗೆ ಕ್ರಮ ಕೈಗೊಳ್ಳಲು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಬೆಳ್ತಂಗಡಿ ತಹಶೀಲ್ದಾರ್ ವರದಿಯನ್ನು ಸಲ್ಲಿಸಲಾಗಿದೆ.

LEAVE A REPLY

Please enter your comment!
Please enter your name here