Home ಸ್ಥಳೀಯ ಸಮಾಚಾರ ಹೆದ್ದಾರಿಅವಾಂತರ “ನಮ್ಮ ಬದುಕುವ ಹಕ್ಕು ಕಸಿಯಬೇಡಿ”, ಲಾಯಿಲದ ಕೈಗಾರಿಕಾ ಪ್ರದೇಶದ ಉದ್ಯಮಿಗಳ ಪ್ರತಿಭಟನೆ

ಹೆದ್ದಾರಿಅವಾಂತರ “ನಮ್ಮ ಬದುಕುವ ಹಕ್ಕು ಕಸಿಯಬೇಡಿ”, ಲಾಯಿಲದ ಕೈಗಾರಿಕಾ ಪ್ರದೇಶದ ಉದ್ಯಮಿಗಳ ಪ್ರತಿಭಟನೆ

360
0

ಬೆಳ್ತಂಗಡಿ; ಹೆದ್ದಾರಿ ಕಾಮಗಾರಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ತಾಲೂಕಿನ ಲಾಯಿಲ ಇಂಡಸ್ಟ್ರಿಯಲ್ ಎಸ್ಟೇಟ್ ನ ಉದ್ಯಮಿಗಳು ಶುಕ್ರವಾರ ಬೆಳಗ್ಗಿನಿಂದ ಕಾಶಿಬೆಟ್ಟುವಿನಲ್ಲಿ ಅಗೆದು ಹಾಕಿರುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕುಳಿತು ತಮ್ಮ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಸಂಕಷ್ಟದಲ್ಲಿರುವ ಉದ್ಯಮಿಗಳು ತಮಗೆ ಕನಿಷ್ಟ ರಸ್ತೆಯನ್ನು ಮಾಡಿಕೊಡುವಂತೆ ಹಾಗೂ ತಮ್ಮ ಮಳಿಗೆಗಳಿಗೆ ಕೆಸರು, ನೀರು ನುಗ್ಗದಂತೆ ಮಾಡಿಕೊಡುವ ಬೇಡಿಕೆಯನ್ನು ಜನ ಪ್ರತಿನಿಧಿಗಳ ಮುಂದೆ ಅಧಿಕಾರಿಗಳ ಮುಂದೆ ಇಡುತ್ತಿದ್ದಾರೆ ಆದರೆ ಇವರ ಬೇಡಿಕೆಗಳಿಗೆ ಈವರೆಗೆ ಯಾರೂ ಸ್ಪಂದಿಸದ ಹಿನ್ನಲೆಯಲ್ಲಿ ಸೆಳೆಯುವ ಉದ್ದೇಶದಿಂದ ಇವರು ರಸ್ತೆಬದಿಯಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟನೆ ಆರಂಭಿಸಿದ್ದಾರೆ.


“ನಮಗೂ ಬದುಕುವ ಹಕ್ಕಿದೆ ನಮ್ಮ ಬದುಕನ್ನು ಕಸಿದುಕೊಳ್ಳಬೇಡಿ” ಎಂಬ ಬೇಡಿಕೆಯೊಂದಿಗೆ ಸಂತ್ರಸ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here