ಬೆಳ್ತಂಗಡಿ: ಕಾರೊಂದು ಕಾಲೇಜಿನ ಕಂಪೌಂಡಿಗೆ ಡಿಕ್ಕಿ ಹೊಡೆದ ಘಟನೆ ಲಾಯಿಲದಲ್ಲಿ ನಡೆದಿದೆ.
ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿಯ ಖಾಸಗಿ ಕಾಲೇಜಿನ ಕಂಪೌಂಡಿಗೆ ಧರ್ಮಸ್ಥಳ ಕಡೆಯಿಂದ ಬೆಳ್ತಂಗಡಿಗೆ ಬರುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆವರಣ ಗೋಡೆ ಮಗುಚಿ ಬಿದ್ದು ಪಕ್ಕದಲ್ಲೇ ಇದ್ದ ಮರ ತಾಗಿ ಕಾರು ನಿಂತಿದೆ. ಒಂದು ವೇಳೆ ಮರ ಇರದಿದ್ದರೆ ಕಾರು ಕಾಲೇಜಿನ ಆವರಣದೊಳಗೆ ಬಿದ್ದು ಅನಾಹುತ ಸಂಭವಿಸುತಿದ್ದು ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಕಾರು ಚಾಲಕ ಪಡಂಗಡಿ ನಿವಾಸಿ ಎಂದು ತಿಳಿದು ಬಂದಿದೆ.