Home ಬ್ರೇಕಿಂಗ್‌ ನ್ಯೂಸ್ ತುಂಬಿದ ಪೆರ್ನಾಲೆ ಕೆರೆ ಆತಂಕದಲ್ಲಿ ಜನರು; ಕೆರೆಯ ಗೇಟ್ ತೆಗೆಯುವ ಪ್ರಯತ್ನಗಳು ವಿಫಲ; ಸ್ಥಳಕ್ಕೆ ಮುಳುಗು...

ತುಂಬಿದ ಪೆರ್ನಾಲೆ ಕೆರೆ ಆತಂಕದಲ್ಲಿ ಜನರು; ಕೆರೆಯ ಗೇಟ್ ತೆಗೆಯುವ ಪ್ರಯತ್ನಗಳು ವಿಫಲ; ಸ್ಥಳಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಆಗಮನ ನಿರೀಕ್ಷೆ

0

ಬೆಳ್ತಂಗಡಿ: ಚಾರ್ಮಾಡಿ ಗ್ರಾಮಪಂಚಾಯತು ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಪೆರ್ನಾಳೆ ಕೆರೆ ತುಂಬಿದ್ದು ಕೆರೆಯ ಗೇಟು ತೆರೆಯಲು ಸ್ಥಳೀಯರು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು ಕೆರೆಯ ಕೆಳ ಭಾಗದಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ ಮೂಡಿಸಿದೆ.
ಇದೀಗ ನೀರಿನಲ್ಲಿ ಮುಳುಗಿ ಗೇಟ್ ಅನ್ನು ತೆರೆಯಲು ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡ ಆಗಮಿಸುವ ನಿರೀಕ್ಷೆಯಿದ್ದು ಜನರು ತಜ್ಞರ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಅರಣ್ಯ ಭಾಗದಲ್ಲಿ ಸುಮಾರು 27 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಈ ಕೆರೆ ಗ್ರಾಮದ ಸುಮಾರು 300ಕ್ಕಿಂತ ಅಧಿಕ ಕುಟುಂಬಗಳಿಗೆ ಬೇಸಿಗೆಯ ಕೃಷಿ ನೀರಿಗೆ ಆಧಾರವಾಗಿದೆ.
ಈ ಬಾರಿ ಮಳೆಗೆ ಕೆರೆಯು ಸಂಪೂರ್ಣ ತುಂಬಿದೆ. ಕೆರೆ ನೀರು ಹೊರ ಬಿಡಲು ಅಳವಡಿಸಲಾದ ಗೇಟು ಮುಚ್ಚಿದ್ದು ಅದನ್ನು ತೆರೆಯಲು ಪಂಚಾಯಿತಿ ಮತ್ತು ಸ್ಥಳೀಯರು ಸಾಕಷ್ಟು ಪ್ರಯತ್ನಿಸಿದ್ದು ಕೆರೆಯಲ್ಲಿ ಹೆಚ್ಚಿನ ನೀರು ತುಂಬಿರುವ ಕಾರಣ ಸಾಧ್ಯವಾಗಿಲ್ಲ. ಗೇಟು ತೆರೆದರೆ ಮಾತ್ರ ನೀರು ಸ್ಥಳೀಯ ತೋಡಿಗೆ ಹರಿದು ಕೆರೆಯಲ್ಲಿ ನೀರಿನ ಮಟ್ಟ ಹಾಗೂ ನೀರಿನ ಒತ್ತಡ ಕಡಿಮೆಯಾಗುತ್ತದೆ. ನೀರನ್ನು ಹೀಗೆ ಬಿಟ್ಟರೆ ಕೆರೆದಂಡೆ ಒಡೆಯುವ ಸಾಧ್ಯತೆಯಿದೆ. ಕೆರೆ ದಂಡೆ ಒಡೆದರೆ ಕರುನಾಳೆ ಪರಿಸರದ 30 ಕುಟುಂಬಗಳ ಸಮೇತ ನೆಲ್ಲಿಗುಡ್ಡೆ, ಕಂಚಾರಿ ಕಂಡ, ಬೇಂದ್ರಾಳ ಮೊದಲಾದ ಪ್ರದೇಶಗಳ ಜನರಿಗೆ ತೀವ್ರ ಸಮಸ್ಯೆ ಹಾಗೂ ಅಪಾಯವು ಉಂಟಾಗುವ ಸಾಧ್ಯತೆ ಇದೆ.


ಇದೀಗ ಗೇಟ್ ತೆಗೆಯುವ ನಿಟ್ಟಿನಲ್ಲಿ ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದು ಪ್ರಯತ್ನ‌ನಡೆಸಿದ್ದರೆ. ಕೆರೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿದ್ದು ಮುಳುಗು ತಜ್ಞರಿಂದ ಮಾತ್ರ ಗೇಟ್ ತೆಗೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೆ.ಪಿ.ಸಿ.ಸಿ ಸದಸ್ಯ ರಕ್ಷಿತ್ ಶಿವರಾಂ ಅವರು ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳದಲ್ಲಿಯೇ ಇದ್ದು ಮಾರ್ಗದರ್ಶನ ನೀಡಿದ್ದಾರೆ. ಗ್ರಾಮ ಚಾಯತಿನ ಅಧಿಕಾರಿಗಳು, ಜನಪ್ರತಿನಿಧಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಮುಳುಗು ಮತ್ತು ತಂಡ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಲ್ಲಿ ಗ್ರಾಮದ ಜನರಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version